ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ,ತುರ್ತು ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಬೈಂದೂರು:ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕ್ಷೇತ್ರದ ಕೆಲವು ಭಾಗದಲ್ಲಿ ನೆರೆ ಆವರಿಸಿದ್ದ ಹಿನ್ನೆಲೆಯಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಬೆಂಗಳೂರಿನಲ್ಲಿ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹಠತ್ ರದ್ದುಗೊಳಿಸಿ ನೇರವಾಗಿ ಕ್ಷೇತ್ರಕ್ಕೆ ಆಗಮಿಸಿ,ಶುಕ್ರವಾರ ಬೆಳಗ್ಗೆಯಿಂದ ನೆರೆಪೀಡಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಸೇರಿದಂತೆ ನೆರೆಹಾನಿಗೆ ಒಳಗಾದವರೊಂದಿಗೆ ಮಾತುಕತೆ ನಡೆಸಿದರು.ನಾವುಂದ ಭಾಗದ ಸಾಲ್ಬುಡ, ನಾಡಾ ಗ್ರಾಮದ ಚಿಕ್ಕಳ್ಳಿ, ಸಂಸಾಡಿ, ಹೆಮ್ಮುಂಜಿ, ಕೊಂಣ್ಕೀ ಪ್ರದೇಶಗಳಲ್ಲಿ ಮಳೆಯಿಂದಾಗಿ ನೆರೆ, ಪ್ರವಾಹ, ಗುಡ್ಡೆ ಕುಸಿತ ಉಂಟಾಗಿದ್ದು ಸ್ಥಳಕ್ಕೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು […]

ನೆರೆ ಬಾಧಿತ ಪ್ರದೇಶದ ದನಕರುಗಳಿಗೆ ಔಷಧ ವಿತರಣೆ

ಕುಂದಾಪುರ:ನೆರೆ ನೀರಿನಿಂದ ಜಲಾವೃತ್ತವಾಗಿರುವ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಪ್ರದೇಶಕ್ಕೆ ಬೈಂದೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ ಖಾರ್ವಿ ಮರವಂತೆ ಮತ್ತು ಸಿಬ್ಬಂದಿಗಳು ದೋಣಿಯಲ್ಲಿ ತೆರಳಿ ದನಕರುಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಗಳನ್ನು ಶುಕ್ರವಾರ ವಿತರಿಸಿದರು.ಸ್ಥಳೀಯರಾದ ನಾಗರಾಜ ನಾವುಂದ ಸಹರಿಸಿದರು.

ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ

ಕುಂದಾಪುರ:ರಾಷ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಬಂಟ್ವಾಡಿ ಕಡೆಗೆ ಸಾಗುತ್ತಿದ್ದ ಟ್ರಕ್ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಯೂರ್ಟನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಸಕ್ಕರೆ ತುಂಬಿದ ಲಾರಿ ಟ್ರಕ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ರಸ್ತೆ ಮೇಲೆ ಉರುಳಿ ಬಿದ್ದಿದ ಘಟನೆ ಶುಕ್ರವಾರ ನಡೆದಿದೆ.ಅಪಘಾತದಲ್ಲಿ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.ಸಕ್ಕರೆ ಚೀಲ ರಸ್ತೆ ತುಂಬೆಲ್ಲಾ ಉರುಳಿ ಬಿದ್ದಿದ್ದು.ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಸಕ್ಕರೆ ಚೀಲಕ್ಕೆ ಮಳೆ ನೀರು […]

You cannot copy content of this page