ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಿಗೆ ಸನ್ಮಾನ

Share

Advertisement
Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಸೋಮವಾರ ನಡೆಯಿತು.ದಾನಿಗಳನ್ನು ಸನ್ಮಾನಿಸಲಾಯಿತು.
ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಶ್ರೀ ಪರಮ ಪೂಜ್ಯ ಈಶವಿಠಲದಾಸ ಸ್ವಾಮಿ ಅವರು ಆಶೀರ್ವಚನಾ ನೀಡಿ ಮಾತನಾಡಿ,ಪಾಶ್ಚಿಮಾತ್ಯ ದೇಶದ ಸಂಸ್ಕøತಿಗೆ ಮಾರುಹೋಗದೆ ನಮ್ಮ ದೇಶದ ಸಂಸ್ಕøತಿಯನ್ನು ಅಳವಡಿಸಿಕೊಂಡು ಬದುಕುವುದರಿಂದ ಸಂಸ್ಕಾರಯುತವಾದ ಬದುಕನ್ನು ಕಂಡುಕೊಳ್ಳಬಹುದಾಗಿದೆ.ಮಾತೃ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆಂದು ಹೇಳಿದರು.
ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಊರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ಸಂಘಟಿತರಾಗಿ ಬದುಕುವುದರ ಜತೆಗೆ,ಧರ್ಮ ಜಾಗೃತಿಯ ಕುರಿತು ಅರಿವನ್ನು ಮೂಡಿಸಿದಂತಾಗುತ್ತದೆ ಎಂದರು.
ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಮಂಜುನಾಥ ಭಟ್ ಉಪ್ರಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಳ್ಳೆ ಮನಸು ಮತ್ತು ಪರಿಶ್ರಮ ನಮ್ಮ ಜೊತೆ ಇದ್ದರೆ ಎಂತಹ ಸಂದರ್ಭವನ್ನು ಕೂಡ ಸುಲಭವಾಗಿ ಎದುರಿಸಬಹುದಾಗಿದೆ ಎನ್ನುವುದಕ್ಕೆ ಬೊಬ್ಬರ್ಯ ದೇವಸ್ಥಾನದ ನಿರ್ಮಾಣವೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಸ್ಥಳದಾನ ಮಾಡಿದವರು ವಸಂತ್ ಬಡಾಲ ಮತ್ತು ಮೋಹನ್ ಡಿ ರಾವ್ ತ್ರಾಸಿ,ಪ್ರಕಾಶ್ಚಂದ್ರ ಶೆಟ್ಟಿ,ವಾಸುದೇವ ಕಾರಂತ,ಶ್ರೀಧರ್ ಹೆಬ್ಬಾರ್,ನಾಗೇಶ್ ಜೋಗಿ,ನರಸಿಂಹ ಹಳಗೇರಿ,ಸೇವಾ ಸಮಿತಿ ಸದಸ್ಯರು,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.ರಾಜು ಎನ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಈಶ್ವರ ದೇವಾಡಿಗ ಚಿತ್ರಾಡಿ ನಿರೂಪಿಸಿದರು.ಜ್ಯೋತಿಷಿ ವಿದ್ವಾನ್ ನೀಲಾವರ ರಘುರಾಮ ಮಧ್ಯಸ್ಥರು ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page