ಬಂಟರಯಾನೆ ನಾಡವರ ಸಂಘ ಬೈಂದೂರು,ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ವಿತರಣೆ

Share

Advertisement
Advertisement
Advertisement

ಕುಂದಾಪುರ:ಬಂಟರಯಾನೆ ನಾಡವರ ಸಂಘ ಬೈಂದೂರು,ಬೆಂಗಳೂರು ಬಂಟರ ಸಂಘ ಮತ್ತು ಉಪ ಸಂಘಗಳ ನೇತೃತ್ವದಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ,ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ.ಜೆ ಸಭಾಭವನ ಯಡ್ತರೆಯಲ್ಲಿ ಭಾನುವಾರ ನಡೆಯಿತು.

ಬೈಂದೂರು ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ಕನಕ ಗ್ರೂಪ್ ಜಗದೀಶ್ ಶೆಟ್ಟಿ ಕುದ್ರುಕೋಡು ಅವರು ಮಾತನಾಡಿ,ಬೈಂದೂರು ಬಂಟರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿವೇತನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ.ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಇವೊಂದು ಕಾರ್ಯಕ್ರಮ ನಡೆದಿದೆ ಎಂದು ಹೇಳಿದರು.ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದ್ದು,ಸಮಾಜದ ನಿವೃತ್ತ ಶಿಕ್ಷಕರನ್ನು ಗೌರವಿಸಲಾಗಿದೆ.ಕಾರ್ಯಕ್ರಮ್ಕಕೆ ಸಹಕಾರ ಕೊಟ್ಟ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಕಟ್ಟಡ ರಚನಾ ಸಮಿತಿ ಬಂಟರ ಯಾನೆ ನಾಡವರ ಸಂಘ ಬೈಂದೂರು ಅಧ್ಯಕ್ಷ ನೈಲಾಡಿ ಶಿವರಾಮ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಂದು ಕೋಟಿಗೂ ಹೆಚ್ಚಿನ ಹಣವನ್ನು ವಿದ್ಯಾರ್ಥಿವೇತನಕ್ಕೆ ಮೀಸಲಿಡಬೇಕು.ಕಲೆ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.ಸಂಘದ ಸದಸ್ಯತ್ವವನ್ನು ಆದಷ್ಟು ಹೆಚ್ಚಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.ಎಲ್ಲರ ಸಹಕಾರದಿಂದ ಸಂಘ ಉನ್ನತ ಸ್ಥಾನ್ಕಕೆ ಬೆಳೆಯುವಂತಾಗಲಿ ಎಂದು ಶುಭಹಾರೈಸಿದರು.

ಸಾಹಿತಿ ಡಾ.ಎಸ್ ಶ್ರೀನಿವಾಸ ಶೆಟ್ಟಿ ಅವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿ ಮಾತನಾಡಿ,ಯಾವುದೇ ಒಂದು ಸಂಘಟನೆ ಯಶಸ್ವಿಯಾಗಿ ಬೆಳೆಯಬೇಕಾದರೆ ಎಲ್ಲರ ತೊಡಗುವಿಕೆ ಅಗತ್ಯವಾಗಿದೆ.ನಡೆಯಲ್ಲಿ ನುಡಿಯಲ್ಲಿ ನೋಟದಲ್ಲಿ ಆಲೋಚನೆಯಲ್ಲಿ ಹೊಸತನವನ್ನು ಅನುಭವಿಸಬೇಕಾಗಿದೆ.ಹೊಸ ತನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.ದುಡಿಮೆ ಒಂದಾಂಶ ಹಣವನ್ನು ಸಂಘಟನೆಗೆ ಕೊಡುವುದರಿಂದ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿ ಆಗುತ್ತದೆ ಎಂದು ಹೇಳಿದರು.ಸಂಘದ ಶಕ್ತಿಯಿಂದ ನಮ್ಮ ಜನಾಂಗದ ರಕ್ಷಣೆಯನ್ನು ಕೂಡ ಮಾಡಬಹುದು ಎಂದರು.

ಬಂಟರ ಸಂಘ ಬೆಂಗಳೂರು ಗೌರವ ಕಾರ್ಯದರ್ಶಿ ಬಿ.ಆನಂದರಾಮ ಶೆಟ್ಟಿ ಮಾತನಾಡಿ,ಬೆಂಗಳೂರು ಬಂಟರ ಸಂಘದ ವತಿಯಿಂದ ವಿದ್ಯಾರ್ಥಿವೇತನ,ಮಾಂಗಲ್ಯ ಯೋಜನೆ,ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ನೆರವು ವಿತರಣೆ,ಪ್ರತಿಭಾ ಪುರಸ್ಕಾರ ವಿತರಣೆ ಸಹಿತ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ.ಸಂಘದ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವುದರ ಮುಖೇನ ಸಂಘದ ಬೆಳವಣಿಗೆಗೆ ಕೊಡುಗೆಯನ್ನು ನೀಡಬೇಕೆಂದು ವಿನಂತಿಸಿಕೊಂಡರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ಕುಮಾರ್ ಶೆಟ್ಟಿ ಆಲೂರು,ಬೇಲ್ಲೂರು ದಿ.ನಾಗಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಕು.ಸಿಂಚನ ಶೆಟ್ಟಿ ಅವರನ್ನು, ನಿವೃತ್ತ ಶಿಕ್ಷಕರನ್ನು,ನಿವೃತ್ತ ಸರಕಾರಿ ಅಧಿಕಾರಿಗಳನ್ನು,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಬಂಟರ ಯಾನೆ ನಾಡವರ ಸಂಘ ಬೈಂದೂರು ವತಿಯಿಂದ ಸನ್ಮಾನಿಸಲಾಯಿತು.ನೂತನ ಸದಸ್ಯರು ಮತ್ತು ದಾನಿಗಳನ್ನು ಗೌರವಿಸಲಾಯಿತು.

ಬಂಟರಯಾನೆ ನಾಡವರ ಸಂಘ ಬೈಂದೂರು ಅಧ್ಯಕ್ಷ ಎಚ್. ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಅರುಣ್ ಕುಮಾರ್ ಶೆಟ್ಟಿ,ಮಾಜಿ ಅಧ್ಯಕ್ಷ ಬಂಟರಯಾನೆ ನಾಡವರ ಸಂಘ ಬೈಂದೂರು ಕೆ.ವಿಠಲ್ ಶೆಟ್ಟಿ ಕಟ್ ಬೇಲ್ತೂರು,ಉದ್ಯಮಿ ಅರುಣ್ ಕುಮಾರ್ ಶೆಟ್ಟಿ,ಡಾ.ಎಮ್. ಲಕ್ಷ್ಮೀನಾರಾಯಣ ಶೆಟ್ಟಿ,ಎನ್.ಡಿ. ಶೆಟ್ಟಿ,ಸದಾನಂದ ಸುಲಾಯ ಚೇರ್‍ಪರ್ಸನ್ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಬಂಟರ ಸಂಘ ಬೆಂಗಳೂರು,ಸುಜನ್ ನೈಲಾಡಿ, ಬಂಟರ ಸಂಘ ಶಿರೂರು ಅಧ್ಯಕ್ಷ ಶ್ರೀನಿವಾಸ ಶೆಟ್ಟಿ,ಗೋಕುಲ ಶೆಟ್ಟಿ,ವಾದಿರಾಜ ಶೆಟ್ಟಿ,ಮಹಿಳಾ ಕಾರ್ಯದರ್ಶಿ ಸುಗುಣ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ಗೌರವಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ,ಮಂಜುನಾಥ ಶೆಟ್ಟಿ, ವಿದ್ಯಾರ್ಥಿ ವೇತನ ಸಂಚಾಲಕ, ಮಂಜುನಾಥ ಶೆಟ್ಟಿ,ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು
ಜಗದೀಶ್ ಶೆಟ್ಟಿ ಕುದ್ರುಕೋಡು ಸ್ವಾಗತಿಸಿದರು.ಶಿಕ್ಷಕ ಕರುಣಾಕರ ಶೆಟ್ಟಿ ನಿರೂಪಿಸಿದರು.ಜಯರಾಮ ಶೆಟ್ಟಿ ಗಂಟಿಹೊಳೆ ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page