ರಾಷ್ಟ್ರೀಯ ಭೂ ದಿನಾಚರಣೆ,ಮರವಂತೆ ಬೀಚ್ ಸ್ವಚ್ಛತೆ

ಕುಂದಾಪುರ:ರಾಷ್ಟ್ರೀಯ ಭೂ ದಿನದ ಅಂಗವಾಗಿ ಹೆಮ್ಮಾಡಿ
ಜನತಾ ಪದವಿಪೂರ್ವ ಕಾಲೇಜು ಹಾಗೂ ಮಣಿಪಾಲ ಮಾಹೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ
ಸಹಯೋಗದೊಂದಿಗೆ ಮರವಂತೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಲಾಯಿತು.
ಮಾಹೆ ಮಣಿಪಾಲದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮರವಂತೆ ಕಡಲ ಕಿನಾರೆಯ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವ್ರಂದದವರು ಉಪಸ್ಥಿತರಿದ್ದರು.


















































































































































































































































































































































































































































































































































































































































































































































































































































































































































































































































































































































































































































































































































































































































































