ಅರಶಿನಗುಂಡಿ ಜಲಪಾತಕ್ಕೆ ಕಾಲು ಜಾರಿ ಬಿದ್ದು ನಾಪತ್ತೆ ಆಗಿದ್ದ ಶರತ್ ಶವವಾಗಿ ಪತ್ತೆ
ಕುಂದಾಪುರ:ಬೈಂದೂರು ತಾಲೂಕಿನ ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಳೆದ ಭಾನುವಾರ ನಾಪತ್ತೆ ಆಗಿದ್ದ ಭದ್ರಾವತಿ ಮೂಲದ ಶರತ್ (23) ಶವವಾಗಿ ಪತ್ತೆ ಆಗಿದ್ದಾನೆ.
ರಜಾ ಮಜಾವನ್ನು ಅನುಭವಿಸಲು ಸ್ನೇಹಿತರ ಜತೆಗೂಡಿ ಅರಶಿನಗುಂಡಿ ಜಲಪಾತಕ್ಕೆ ಬಂದಿದ್ದ ಶರತ್ ಜಲಪಾತವನ್ನು ನೋಡುತ್ತಾ ನಿಂತ್ತಿದ್ದ ಸಂದರ್ಭ ಕಾಲು ಜಾರಿ ಜಲಪಾತಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.ಶರತ್ ನೀರಿಗೆ ಬೀಳುತ್ತಿರುವ ವಿಡಿಯೋ ಆತನ ಸ್ನೇಹಿತನ ಮೊಬೈಲ್ ಕ್ಯಾಮಾರಾದಲ್ಲಿ ಸೆರೆ ಆಗಿತ್ತು,ಶರತ್‍ಗಾಗಿ ಕಳೆದ ಒಂದು ವಾರಗಳಿಂದ ಹುಡುಕಾಟ ನಡೆಸಿದ್ದರು ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.ಕಳೆದ ಎರಡು ದಿನಗಳಿಂದ ಮಳೆ ತೀವೃತೆ ಕಮ್ಮಿ ಆಗಿದ್ದರಿಂದ ಶರತ್‍ಗಾಗಿ ಹುಡುಕಾಟಕ್ಕೆ ವೇಗವನ್ನು ನೀಡಲಾಗಿದ್ದು.ಜಲಪಾತದ ಸನಿಹದಲ್ಲೇ ಕಲ್ಲಿನ ಪೊಟರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶರತ್ ಶವ ಪತ್ತೆಯಾಗಿದೆ.
ಜಲಪಾತದಲ್ಲಿ ಬಿದ್ದು ಕಣ್ಮರೆಯಾಗಿದ್ದ ಯುವಕನ ಪತ್ತೆ ಕಾರ್ಯಾಚರಣೆಯಲ್ಲಿ ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್ ತಂಡ,ಈಶ್ವರ್ ಮಲ್ಪೆ ತಂಡ ಮತ್ತು ಮುಳುಗುತಜ್ಞ ದಿನೇಶ್ ಖಾರ್ವಿ ನೇತೃತ್ವದ ಜೀವರಕ್ಷಕ ತಂಡದ ಸದಸ್ಯರು ಭಾಗಿಯಾಗಿದ್ದರೂ.ಡ್ರೋನ್ ಕ್ಯಾಮಾರಾದ ಮೂಲಕವೂ ಹುಡುಕಾಟ ಮಾಡಲಾಗಿತ್ತು.ಕೊಲ್ಲೂರು ಪಿಎಸ್‍ಐ ಜಯಶ್ರೀ ಹೊನ್ನೂರು ಹಾಗೂ ಸುಧಾರಾಣಿ ನೇತೃತ್ವದ ತಂಡ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ,ಉಡುಪಿ ಎನ್‍ಡಿಆರ್‍ಎಫ್ ತಂಡ,ಕುಂದಾಪುರ ಮತ್ತು ಬೈಂದೂರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು.ಮಗನ ಪತ್ತೆಗಾಗಿ ಶರತ್ ಪೋಷಕರು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು.ನಾಪತ್ತೆಯಾಗಿದ್ದ ಯುವಕನ ಶವದ ಪತ್ತೆಗಾಗಿ ಡ್ರೋನ್ ಕ್ಯಾಮಾರಾ ಬಳಸಿಕೊಂಡಿರುವುದು ಈ ಭಾಗದಲ್ಲಿ ಇದೆ ಮೊದಲು.



















































































































































































































































































































































































































































































































































































































































































































































































































































































































































































































































































































































































































































































































































































































































































