ಬಿಪರ್‍ಜಾಯ್ ಚಂಡಮಾರುತ ಅಬ್ಬರ,ರಸ್ತೆ ಬಿರುಕು
ಕುಂದಾಪುರ:ಬಿಪರ್‍ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು ಬಿಟ್ಟಿದೆ.
ಕಳೆದ ಬಾರಿ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದ ಪ್ರಭಾವದಿಂದ ಮರವಂತೆ ಕರಾವಳಿ ಭಾಗದ ರಸ್ತೆ ಸಮುದ್ರ ಪಾಲಾಗಿತ್ತು,ಮೀನುಗಾರರು ಸ್ವತಃ ತಮ್ಮ ಖರ್ಚಿನಲ್ಲಿ ಕೆಂಪು ಮಣ್ಣನ್ನು ಹಾಕಿ ರಸ್ತೆಯನ್ನು ಪುನರ್ ನಿರ್ಮಣ ಮಾಡಿದ್ದರು ಆದರೆ ಸರಕಾರ ಯಾವುದೇ ರೀತಿ ಪರಿಹಾರದ ಕ್ರಮಗಳನ್ನು ಕೈಗೊಳ್ಳದೆ ಅಸಹಕಾರವನ್ನು ತಾಳಿತ್ತು.ಕಡಲ ತೀರದ ವಾಸಿಗಳ ರಕ್ಷಣೆಗೆ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.



















































































































































































































































































































































































































































































































































































































































































































































































































































































































































































































































































































































































































































































































































































































































































