ಕಟ್‌ಬೇಲ್ತೂರು:ಪಾಳು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಂದಾಪುರ:ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಇರುವ ಸುಳ್ಸೆ ಬಾಬು ಪೂಜಾರಿ ಎಂಬುವವರ ತೋಟದಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಚಿರತೆಯನ್ನು ಶನಿವಾರ ರಕ್ಷಿಸಲಾಗಿದೆ.
ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶದ ಕಡೆಗೆ ಬಂದಿರುವ ಅಂದಾಜು ೩ ವರ್ಷ ಪ್ರಾಯದ ಗಂಡು ಚಿರತೆಯೊಂದು ರಾತ್ರಿ ಸಮಯದಲ್ಲಿ ಆವರಣವಿಲ್ಲದ ಪಾಳು ಬಿದ್ದ ಬಾವಿಗೆ ಬಿದ್ದಿದೆ.ಬೆಳಗಿನ ಸಮಯದಲ್ಲಿ ಪ್ರಾಣಿಯೊಂದು ಕೂಗುತ್ತಿರುವ ಶಬ್ಧವನ್ನು ಗಮನಿಸಿದ ಬಾಬು ಪೂಜಾರಿ ಅವರು ಮನೆ ಹಿಂದುಗಡೆ ಇರುವ ತೋಟದಲ್ಲಿರುವ ಬಾವಿಯನ್ನು ಇಣುಕಿ ನೋಡಿದಾಗ ಚಿರತೆ ಬಾವಿಗೆ ಬಿದ್ದಿರುವುದು ಅವರ ಗಮನಕ್ಕೆ ಬಂದಿದೆ.ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.ಘಟನೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಾವಿಯೊಳಗೆ ಬೊನ್ ಇಳಿಸಿ ಸುರಕ್ಷಿತವಾಗಿ ಚಿರತೆಯನ್ನು ರಕ್ಷಿಸಿದರು,ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬೀಡಲಾಯಿತು.ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿ ಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ,ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ ಕಿರಣ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್,ದಿಲೀಪ್,ಸುನೀಲ್,ಶರತ್ ಹಾಗೂ ಗೀತ,ಅರಣ್ಯ ರಕ್ಷಕರಾದ ದೀಪಶ್ರೀ,ಮಾಲತಿ,ಉದಯ್,ಬಸವರಾಜ್,ರಾಘವೇಂದ್ರ,ಚAದ್ರಾವತಿ,ಅರಣ್ಯ ವೀಕ್ಷಕರಾದ ಸೋಮಶೇಖರ್,ಸತೀಶ್,ವಾಹನ ಚಾಲಕ ಅಶೋಕ ಚಿರತೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಸ್ಥಳೀಯರು ಸಹರಿಸಿದರು.



















































































































































































































































































































































































































































































































































































































































































































































































































































































































































































































































































































































































































































































































































































































































































