ಬೈಂದೂರು:ಅಂತರಾಷ್ಟ್ರೀಯ ಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟನೆ









ಕುಂದಾಪುರ:ಸಮೃದ್ಧ ಬೈಂದೂರು,ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಹಾಗೂ ಅಜಿನೋರಾಹ್ ಸಂಸ್ಥೆ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದ ಬೃಹತ್ ಉದ್ಯೋಗ ಮೇಳ ಬೈಂದೂರು ಜೆ.ಎನ್.ಆರ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ಅಂತರಾಷ್ಟ್ರೀಯ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ,ಯುವ ಶಕ್ತಿಗೆ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ.ಸಂದರ್ಶನದಲ್ಲಿ ಆಯ್ಕೆಗೊಳ್ಳುವ ಅಭ್ಯರ್ಥಿಗಳಿಗೆ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡುವುದರ ಜತೆಗೆ ವಿದೇಶಕ್ಕೆ ತೆರಳಲು ತಗಲುವ ವೆಚ್ಚವನ್ನು ಸರಕಾರವೆ ಮಾಡಲಿದೆ ಎಂದು ಹೇಳಿದರು.ಸರಕಾರಿ ನೌಕರಿಗೆ ಕಾಯಕದೇ ಕೌಶಲ್ಯಕ್ಕೆ ಆಧಾರಿತ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಲು ಯುವಜನತೆ ಮುಂದಾಗಬೇಕು.ಯುವಕರಿಗೆ ಉದ್ಯೋಗವನ್ನು ನೀಡಲು ಬಜೆಟ್ ನಲ್ಲಿ ಎರಡು ಲಕ್ಷ ಕೋಟಿ ಹಣ ಸರಕಾರ ಮೀಸಲು ಇಟ್ಟಿದ್ದೆ.ನಾರಿ ಶಕ್ತಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ ಎಂದರು.
ಮಹಾನಗರಗಳಲ್ಲಿ ಆಯೋಜನೆ ಗೊಳ್ಳುತ್ತಿರುವ ಅಂತರಾಷ್ಟ್ರೀಯ ಮಟ್ಟದ ಉದ್ಯೋಗ ಮೇಳ ತಾಲೂಕು ಕೇಂದ್ರ ಮಟ್ಟದಲ್ಲಿ ಆಯೋಜನೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಯುವಕರಿಗೆ ವಿದೇಶದಲ್ಲಿ ಉದ್ಯೋಗ ಹೊಂದಲು ಅವಕಾಶವನ್ನು ಕಲ್ಪಿಸಿ ಕೊಟ್ಟಂತೆ ಆಗಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸಲು ಕೊಲ್ಲೂರು ಕಾರಿಡಾರ್,ಕೇಬಲ್ ಕಾರ್,ಕೊಸ್ಟಾಲ್ ಬೆಲ್ಟ್ ಅಭಿವೃದ್ಧಿ ಸಹಿತ,ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚಿ,ಅಭಿವೃದ್ಧಿ ಪಥದತ್ತ ಸಾಗಲು ಕೆಲಸ ಮಾಡಲಾಗುವುದು ಎಂದರು.ಉದ್ಯೋಗ ಮೇಳ ನೂರಕ್ಕೆ ನೂರರಷ್ಟು ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.
ಅಜಿನೋಹಾರ ಮಾರ್ಕೇಟಿಂಗ್ ಡೈರೆಕ್ಟರ್ ಅಜೀವೊ ಅಗಸ್ಟಿನಾ ಮಾತನಾಡಿ,ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಂತಹದೊಂದು ದೊಡ್ಡ ಉದ್ಯೋಗ ಮೇಳ ಆಯೋಜನೆ ಮಾಡುತ್ತಿರುವುದು ಇದೆ ಮೊದಲು.ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗವನ್ನು ಪಡೆದು ಕೊಳ್ಳಲು ಇವೊಂದು ಉದ್ಯೋಗ ಮೇಳ ಯವಜನತೆಗೆ ಬಹಳಷ್ಟು ಪ್ರಯೋಜನಾಕಾರಿ ಆಗಲಿದೆ ಎಂದರು.
ಟೋಕಿಯೊ ಸ್ಟೇಟ್‍ಬ್ಯಾಂಕ್ ಶಾಚಿ ಕಿಡಚಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ,ಬೈಂದೂರು ಕ್ಷೇತ್ರದ ಭಾಗದ ಯುವಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎನ್ನುವ ಮನೋಭಾವದೊಂದಿಗೆ ಇಂತಹದೊಂದು ಬೃಹತ್ ಉದ್ಯೋಗ ಮೇಳವನ್ನು ಎಲ್ಲರ ಸಹಕಾರದಿಂದ ಆಯೋಜನೆ ಮಾಡಲಾಗಿದೆ ಎಂದರು.ಟ್ರೈನಿಂಗ್ ಸೆಂಟರ್‍ನಲ್ಲಿ ಕೋಚಿಂಗ್ ನೀಡಿ ತರಬೇತಿ ಯೊಂದಿಗೆ ವಿದೇಶಕ್ಕೆ ಉದ್ಯೋಗಕ್ಕೆ ಕಳುಹಿಸಲಾಗುತ್ತದೆ.ಪ್ರಧಾನಿ ಮೋದಿ ಅವರ ಯೋಜನೆ ಮತ್ತು ಅವರ ಸಹಕಾರದಿಂದ ಉದ್ಯೋಗ ಮೇಳ ಯಶಸ್ಸು ಕಾಣಲಿದೆ.ತಮ್ಮ ಕೌಶಲ್ಯ ದೊಂದಿಗೆ ಉತ್ತಮ ರೀತಿಯಲ್ಲಿ ಜೀವನ ಕಂಡು ಕೊಳ್ಳಬಹುದು.ನಿಮ್ಮ ಬೆನ್ನಿಗೆ ನಾವು ಇದ್ದು ಪೆÇ್ರೀತ್ಸಾಹ ನೀಡುತ್ತೇವೆ ಎಂದು ಹೇಳಿದರು.
ವಿವಿಧ ಕಂಪನಿಗಳ ಮುಖ್ಯಸ್ಥರು,ವೆಂಕಟೇಶ ಕಿಣಿ,ಕೃಷ್ಣ ಪ್ರಸಾದ ಅಡ್ಯಂತಾಯ,ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಉಪಸ್ಥಿತರಿದ್ದರು.ಬಿ.ಎಸ್ ಸುರೇಶ ಶೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಬ್ರಹ್ಮಣ್ಯ ನಿರೂಪಿಸಿದರು.
ಜಪಾನ್,ಚೈನಾ,ಕೊರಿಯಾ,ದುಬೈ ಸೇರಿದಂತೆ ದೇಶ-ವಿದೇಶಗಳ ನೂರಾರು ಪ್ರತಿಷ್ಠಿತ ದೈತ್ಯ ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಂಡು ರಾಜ್ಯದ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರಕುವ ಆಶಾಭಾವ ಮೂಡಿದೆ.ಅಂತರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಸುಮಾರು 7,500 ಕ್ಕೂ ಅಧಿಕ ಅಭ್ಯರ್ಥಿಗಳ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.ಕುಂದಾಪುರ,ಬೈಂದೂರು,ಭಟ್ಕಳ,ಶಿವಮೊಗ್ಗ,ಚಿಕ್ಕಮಗಳೂರು,
ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ದ.ಕ ಜಿಲ್ಲೆಗಳ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಇಂತಹದೊಂದು ದೊಡ್ಡ ಮಟ್ಟದ ಉದ್ಯೋಗ ಮೇಳ ಆಯೋಜನೆ ಗೊಂಡಿರುವುದು ಇದೆ ಮೊದಲು.
ವರದಿ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ
ಮೊಬೈಲ್ ಸಂಖ್ಯೆ-9916284048