ಕರಾವಳಿ ಬೈಲಿಗೆ ಸಹ್ಯಾದ್ರಿ ಬ್ರಹ್ಮ ಹೊಸ ಭತ್ತದ ತಳಿ:ರೈತರಿಗೆ ಉಚಿತವಾಗಿ ಬೀಜ ವಿತರಣೆ

Share

Advertisement
Advertisement
Advertisement

ಬ್ರಹ್ಮಾವರ:ವೈವಿಧ್ಯಮಯ ವಾತಾವಾರಣವನ್ನು ಹೊಂದಿರುವ ಕರಾವಳಿ ತೀರ ಪ್ರದೇಶಕ್ಕೆ ಒಗ್ಗಿ ಕೊಳ್ಳುವಂತಹ ಭತ್ತದ ತಳಿಗಳನ್ನು ಆವಿಷ್ಕಾರ ಮಾಡುವಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಿರುವ ವಲಯ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಂಸ್ಥೆ ಸಹ್ಯಾದ್ರಿ ಬ್ರಹ್ಮ ಎನ್ನುವ ಹೊಸ ಭತ್ತದ ತಳಿಯನ್ನು ಸಂಶೋಧನೆಯನ್ನು ಮಾಡಿದ್ದು ಪ್ರಯೋಗ ಯಶಸ್ವಿಯಾಗುವುದರ ಮುಖೇನ ಕರಾವಳಿ ಮಣ್ಣಿಗೆ ಹೊಸ ಭತ್ತದ ತಳಿ ಆಗಮನವಾಗಿದೆ.


ಕುಚ್ಚಲಕ್ಕಿ (ಕೆಂಪು ಭತ್ತ) ಎನ್ನುವುದು ಕರ್ನಾಟಕ ಕರಾವಳಿ ಪ್ರದೇಶದ ಪ್ರಮುಖ ಆಹಾರ ಬೆಳೆಯಾಗಿದೆ,ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ,ಬೈಂದೂರು,ಬ್ರಹ್ಮವಾರ,ಉಡುಪಿ ಸಹಿತ ದ.ಕ ಜಿಲ್ಲೆಯ ಭಾಗಗಳ ಭೌಗೋಳಿಕ ಸನ್ನಿವೇಶ ಹಾಗೂ ವಾತಾವರಣ,ಮಣ್ಣಿನ ಗುಣಧರ್ಮಗಳು ವಿಶಿಷ್ಟವಾದ ರೀತಿಯಿಂದ ಕೂಡಿದೆ.ಇಲ್ಲಿನ ಮಣ್ಣಿಗೆ
ಹೊಂದಿಕೊಂಡು ಬೆಳೆಯುವಂತಹ ಸಾವಿರಾರು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆದುಕೊಂಡು ಹೋಗುವಂತಹ ಸಮಯದಲ್ಲಿ,ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಾದ ಸಂಶೋಧನಾ ಬೆಳವಣಿಗೆಯಿಂದಾಗಿ (ಹಸಿರು ಕಾಂತ್ರಿ) ನಾನಾ ಭಾಗಗಳಲ್ಲಿ ವಿವಿಧ ತಳಿಗಳನ್ನು ಪರಿಚಯಿಸುವಲ್ಲಿ ಸಂಶೋಧನೆ ಸಂಸ್ಥೆಗಳು ಯಶಸ್ವಿಯಾಗಿವೆ.ಸಂಶೋಧನೆಯ ಫಲವಾಗಿ ಕರಾವಳಿ ಭಾಗಗಕ್ಕೆ ಜಯ ಮತ್ತು ಐ.ಆರ್-8 ಎಂಬ ಬಿಳಿ ಭತ್ತದ ತಳಿಗಳನ್ನು ಈ ಹಿಂದೆ ಪರಿಚಯಿಸಲಾಗಿತ್ತು.
ಸಹ್ಯಾದ್ರಿ ಬ್ರಹ್ಮ ಭತ್ತದ ತಳಿ ಬೀಜವನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page