ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ

ಕುಂದಾಪುರ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ,ಶತ ಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರ್ಚ್ 13 ರಿಂದ ಮಾರ್ಚ್ 17 ರ ತನಕ ನಡೆಯಲಿದೆ.

ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಧರ್ಮದರ್ಶಿಗಳಾದ ಹೆಚ್.ಬಾಲಚಂದ್ರ ಭಟ್ಟ ಅವರು ಮಾತನಾಡಿ,ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ ಮತ್ತು ಬಹ್ರಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದ ಕುರಿತು ವಿವರಣೆಯನ್ನು ನೀಡಿದರು.

ದಿನಾಂಕ 13 ರಂದು ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 8 ರಿಂದ ಶಿವದೂತ ಗುಳಿಗ ನಾಟಕ ಜರುಗಲಿದೆ.
ದಿನಾಂಕ 14 ರಂದು ಸಂಜೆ 8 ರಿಂದ ಇನ್ಸ್‍ಫೆಕ್ಟರ್ ಅಣ್ಣಪ್ಪ ನಗೆ ನಾಟಕ ಹಾಗೂ ದಿನಾಂಕ 15 ರಂದು ಮಾಯಾಲೋಕ ಜಾದೂ ಪ್ರದರ್ಶನ.ದಿನಾಂಕ 16 ರಂದು ಸ್ವರಾಂಜಲಿ ಕಾರ್ಯಕ್ರಮ,ದಿನಾಂಕ 17 ರಂದು ಶ್ರೀ…
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ
ಕುಂದಾಪುರ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ,ಶತ ಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರ್ಚ್ 13 ರಿಂದ ಮಾರ್ಚ್ 17 ರ ತನಕ ನಡೆಯಲಿದೆ.
ಮಾರ್ಚ್.13 ರಂದು ಬೆಳಿಗ್ಗೆ 7 ರಿಂದ ಲಕ್ಷ ಮೋದಕ ಹವನ ಪ್ರಾರಂಭ,ಬೆಳಿಗ್ಗೆ 9.30 ಕ್ಕೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹದಿಂದ ತಕ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಶ್ರೀ ದೇವರಿಗೆ ಪ್ರಸನ್ನ ಪೂಜೆ ನೂತನ ದೇವಾಲಯ ಲೋಕಾರ್ಪಣೆ,ಶಿಖರ ಕಲಶಸ್ಥಾಪನೆ,ಅಭಿಷೇಕ ನೆರವೇರಿಸಿ ಭಕ್ತರನ್ನು ಆಶೀರ್ವದಿಸಿ,ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ ಬಳಿಕ ಮಹಾ ಅನ್ನಸಂತರ್ಪಣೆ ಜರುಗಲಿದೆ.
ಸಂಜೆ 5.30ಕ್ಕೆ ಪೂಜ್ಯ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.ಶ್ರೀ ದೇವರಿಗೆ ಬೆಳ್ಳಿ ರಥ ಸಮರ್ಪಣೆ ಕಾರ್ಯ ನಡೆಯಲಿದೆ.ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಮಾರ್ಚ್.14 ರಂದು ಗುರುವಾರ ಬೆಳಿಗ್ಗೆ ಘಂಟೆ 10.ಕ್ಕೆ ಪರಮಪೂಜ್ಯ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮ್ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.ಶ್ರೀದೇವರಿಗೆ ಪೂಜೆ,ಶ್ರೀಗಳಿಂದ ಆಶೀರ್ವಚನ,ಮಂತ್ರಾಕ್ಷತೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6 ರಿಂದ ಧಾರ್ಮಿಕ ಸಭೆ ಜರುಗಲಿದೆ.ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳು ಶ್ರೀ ಸುಬ್ರಹ್ಮಣ್ಯ ಮಠ ಆಶೀರ್ವಚನ ನೀಡಲಿದ್ದಾರೆ.
ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಶ್ರೀ ಗೋಕರ್ಣ ಪರ್ತಗಾಳಿ ಮಠ ಶ್ರೀಕ್ಷೆತ್ರಕ್ಕೆ ಆಗಮಿಸಲಿದ್ದಾರೆ.
ಮಾಚ್.15 ರಂದು ಬೆಳಿಗ್ಗೆ 8 ರಿಂದ ಲಕ್ಷ ಮದಕ ಹವನ ಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6 ರಿಂದ ಧಾರ್ಮಿಕ ಸಭೆ ಜರುಗಲಿದೆ.ಕೇಮಾರು ಸಾಂದೀಪನಿ ಮಠ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.
ಮಾರ್ಚ್.16 ರಂದು ಶನಿವಾರ ಬೆಳಿಗ್ಗೆ 8 ರಿಂದ ಶತಚಂಡಿಕಾಯಾಗ ಪೂರ್ಣಾಹುತಿ ನಡೆಯಲಿದೆ.ಶ್ರೀ ಬಾಳೇಕುದುರು ಮಠ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹಾಗೂ ಶ್ರೀ ಭೀಮೇಶ್ವರ ಜೋಯಿಸರು ಧರ್ಮಕರ್ತರು ಶ್ರೀ ಕ್ಷೇತ್ರ ಹೊರನಾಡು ದಿವ್ಯ ಉಪಸ್ಥಿತಿ ಇರಲಿದೆ. ಸಂಜೆ 6 ರಿಂದ ಧಾರ್ಮಿಕ ಸಭೆ ನಡೆಯಲಿದೆ.ಕಾಣಿಯೂರು ಮಠ ಉಡುಪಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಗಳು ಆಶೀರ್ವಚನ ನೀಡಲಿದ್ದಾರೆ.
ಮಾರ್ಚ್.17 ರಂದು ಭಾನುವಾರ ಬೆಳಿಗ್ಗೆ 7 ರಿಂದ 2016 ಕಾಯಿ ಗಣಹೋಮ ಪ್ರಾರಂಭವಾಗಲಿದೆ.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಲಿದ್ದು ಆರ್ಶಿರ್ವಚನ ನೀಡಲಿದ್ದಾರೆ.ರಜತ ಕಲಶಾಭಿಷೇಕ,.ಪ್ರಧಾನ ಬ್ರಹ್ಮಕಲಶಾಭಿಷೇಕ ಮತ್ತು ಕನಕಾಭಿಷೇಕ ನಡೆಯಲಿದೆ.ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ.ಸಂಜೆ 6 ರಿಂದ ಧಾರ್ಮಿಕ ಸಭೆ ಜರುಗಲಿದೆ.ಪೇಜಾವರ ಮಠ ಉಡುಪಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆನೆಗುಂದಿ ಮಹಾಸಂಸ್ಥಾನ,ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಗಾಣಗಾಪುರ ಒಡಿಯೂರು ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.
ದಿನಾಂಕ 13 ರಂದು ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 8 ರಿಂದ ಶಿವದೂತ ಗುಳಿಗ ನಾಟಕ ಜರುಗಲಿದೆ.
ದಿನಾಂಕ 14 ರಂದು ಸಂಜೆ 8 ರಿಂದ ಇನ್ಸ್‍ಫೆಕ್ಟರ್ ಅಣ್ಣಪ್ಪ ನಗೆ ನಾಟಕ ಹಾಗೂ ದಿನಾಂಕ 15 ರಂದು ಮಾಯಾಲೋಕ ಜಾದೂ ಪ್ರದರ್ಶನ.ದಿನಾಂಕ 16 ರಂದು ಸ್ವರಾಂಜಲಿ ಕಾರ್ಯಕ್ರಮ,ದಿನಾಂಕ 17 ರಂದು ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಹಾಗೂ ಶ್ರೀ ನಂದಿಕೇಶ್ವರ ಯಕ್ಷಗಾನ ಮೆಕ್ಕೆಕಟ್ಟು ಮೇಳದಿಂದ ಕೂಡಾಟ ನಡಯಲಿದೆ.
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಧರ್ಮದರ್ಶಿಗಳಾದ ಹೆಚ್.ಬಾಲಚಂದ್ರ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಜಗದೀಶ ದೇವಾಡಿಗ
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9916284048