ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ ಉದ್ಘಾಟನೆ

Share

Advertisement
Advertisement
Advertisement

ಕುಂದಾಪುರ:ಯುನೆಟೈಡ್ ಟೊಯೋಟ ಕಂಪೆನಿ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಊರಾಗ್ ಒಂದ ಕಾರ್ ಹಬ್ಬ ಎನ್ನುವ ವಿನೂತ ಕಾರ್ಯಕ್ರಮವನ್ನು ಬಸ್ರೂರು ಜಂಕ್ಷನ್‍ನಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ಊರಾಗ್ ಒಂದ ಕಾರ್ ಹಬ್ಬದ ಪ್ರಯುಕ್ತ ಟೊಯೋಟ ಕಂಪೆನಿಯ ವಿವಿಧ ಬಗೆಯ ಕಾರ್‍ಗಳನ್ನು ಪ್ರದರ್ಶನಕ್ಕೆ ಇಡಲಾಯಿತು.ದುಬಾರಿ ಬೆಲೆಯ ಕಾರ್‍ಗಳನ್ನು ನೋಡಿ ಜನರು ಖುಷಿಪಟ್ಟರು.ಗ್ರಾಹಕರು ಕಾರ್ ಹಬ್ಬದಲ್ಲಿ ಭಾಗವಹಿಸಿ ಟೊಯೋಟ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡು.ಹೊಸ ಕಾರ್ ಖರೀದಿಗೆ ಬುಕ್ಕಿಂಗ್ ಕೂಡ ಮಾಡಿದರು.ಗ್ರಾಹಕರಿಗೆ ಟೆಸ್ಟ್ ಡ್ರೈ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ಮಾಡಲಾಯಿತು.
ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು ದೀಪ ಬೆಳಗಿಸುವುದರ ಮೂಲಕ ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಅಷ್ಟೇನು ಅನುಕೂಲತೆಗಳು ಇಲ್ಲದಂತಹ ಆಗಿನ ಕಾಲದಲ್ಲಿ ಕುಂದಾಪುರ ತಾಲೂಕಿನಲ್ಲಿ ಬರೆ ಎರಡು ಕಾರುಗಳು ಮಾತ್ರ ಓಡಾಟ ಮಾಡುತ್ತಿದ್ದವು.ಬಹಳಷ್ಟು ವೇಗವಾಗಿ ಬೆಳೆಯುತ್ತಿರುವ ಕುಂದಾಪುರ ತಾಲೂಕಿನಲ್ಲಿ ಇಂದು ಬದಲಾವಣೆಯ ಪರ್ವವನ್ನು ನೋಡಬಹುದಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಕಾರ್ ಮೇಳವನ್ನು ಆಯೋಜನೆ ಮಾಡಿರುವುದರಿಂದ ಹಳ್ಳಿ ಜನರು ಕೂಡ ತಮ್ಮ ಊರಿನಲ್ಲೆ ಉತ್ತಮ ದರ್ಜೆ ಕಾರ್‍ಗಳನ್ನು ನೋಡಿ ಕೊಂಡು ಕೊಳ್ಳಲು ಅವಕಾಶವನ್ನು ಕಲ್ಪಿಸಿದಂತೆ ಆಗಿದೆ ಎಂದರು.
ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನಕರ ಶೆಟ್ಟಿ ಮಾತನಾಡಿ,ಕಾರ್‍ಗಳನ್ನು ಕೊಂಡು ಕೊಳ್ಳಬೇಕಾಗಿದ್ದರೆ ಈ ಹಿಂದೆ ನಗರ ಪ್ರದೇಶಗಳಿಗೆ ಹೊಗಬೇಕಾಗಿತ್ತು.ಕುಂದಾಪುರದಂತಹ ಪ್ರದೇಶದಲ್ಲಿ ತಮ್ಮ ಕಂಪೆನಿ ಶೋರೂಂ ಅನ್ನು ಆರಂಭಿಸುವುದರ ಮೂಲಕ ತಮ್ಮ ಊರಿನಲ್ಲೆ ಆಕರ್ಷಕ ಕಾರ್‍ಗಳನ್ನು ನೋಡಿ ಕೊಂಡು ಕೊಳ್ಳಲು ಜನರಿಗೆ ಟೊಯೋಟ ಕಂಪೆನಿ ಅವಕಾಶವನ್ನು ಮಾಡಿಕೊಟ್ಟಿದೆ ಎಂದರು.
ಯೂಟ್ರಸ್ಟ್ ಮ್ಯಾನೇಜರ್ ಪ್ರತಾಪ ಅವರು ಕಾರ್ ಮೇಳವನ್ನು ಕುರಿತು ಮಾತನಾಡಿ,ಯುನೈಟೆಡ್ ಕಂಪೆನಿ ವತಿಯಿಂದ ಊರಾಗ್ ಒಂದ ಕಾರ ಹಬ್ಬವನ್ನು ಬಸ್ರೂರುನಲ್ಲಿ ಆಯೋಜನೆ ಮಾಡಲಾಗಿದೆ.ಇವೊಂದು ಕಾರ್ ಹಬ್ಬ ಮೇ.26 ರ ತನಕ ನಡೆಯಲಿದೆ ಎಂದು ಹೇಳಿದರು.ಜನರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಎಂದರು.ಒನ್ ಸ್ಪಾಟ್‍ನಲ್ಲಿ ಹಳೆ ಕಾರನ್ನು ಉತ್ತಮ ಬೆಲೆಗೆ ಖರೀದಿಸಿ ಹೊಸಕಾರಿಗೆ ಲೊನ್ ವ್ಯವಸ್ಥೆ ಕೂಡ ಸ್ಥಳದಲ್ಲೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೇವೆ ಜನರು ಕಾರ್ ಹಬ್ಬ ಪ್ರಯೋಜನ ಪಡೆದುಕೊಳ್ಳಬೇಕೆಂದರು.ಗ್ಲಾಂಝಾ ಮತ್ತು ಹೈರೆಡರ್ ಕಾರ್ ಮೇಲೆ ಒಂದು ಲಕ್ಷ ಹಾಗೂ ಪಾರ್ಚೂನರ್ ಕಾರ್ ಮೇಲೆ 3 ಲಕ್ಷ ಡಿಸ್ಕೌಂಟ್ ಆಫರ್ ಇಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುನೈಟೆಡ್ ಟೊಯೋಟ ಕುಂದಾಪುರ ಜಾಲಾಡಿ ಬ್ರಾಂಚ್ ಮ್ಯಾನೇಜರ್ ರವೀಂದ್ರ,ಮಾರ್ಕೆಂಟಿಗ್ ಗ್ರೂಪ್ ಮ್ಯಾನೇಜರ್ ಸೋನಿಯ,ಕುಂದಾಪುರ ಟೀಮ್ ಲೀಡರ್ ಆದರ್ಶ ಮತ್ತು ಸಿಬ್ಬಂದಿಗಳು ಉಪಸ್ಥಿತಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page