ಉಪ್ರಳ್ಳಿ:ಹೊರೆ ಕಾಣಿಕೆ ವಾಹಾನ ಜಾಥಾಕ್ಕೆ ಚಾಲನೆ

ಕುಂದಾಪುರ:ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಶ್ರೀಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ನೇತೃತ್ವದಲ್ಲಿ ಹಾಗೂ ವಿಶ್ವಕರ್ಮ ಸಮಾಜದ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ಹೊರೆ ಕಾಣಿಕೆ ವಾಹನ ಜಾಥಾ ಕಾರ್ಯಕ್ರಮ ತ್ರಾಸಿಯಿಂದ ನಾಗೂರು ಮಾರ್ಗವಾಗಿ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ವರೆಗೆ ಭಾನುವಾರ ನಡೆಯಿತು.
ಶ್ರೀಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಆಡಳಿತ ಮೊಕ್ತೇಸರರಾದ ಚಂದ್ರಯ್ಯ ಆಚಾರ್ಯ ಕಳಿ ಅವರು ತ್ರಾಸಿಯಲ್ಲಿ ಹೊರೆ ಕಾಣಿಕೆ ವಾಹನ ಜಾಥಕ್ಕೆ ಚಾಲನೆಯನ್ನು ನೀಡಿದರು.ಮಾಜಿ ಮೊಕ್ತೇಸರ ಸುಧಾಕರ ಆಚಾರ್ಯ ತ್ರಾಸಿ,ಮಂಜುನಾಥ ಆಚಾರ್ಯ ಬಡಾಕೆರೆ,ಬಾಬು ಆಚಾರ್ಯ ನೀರಕೆರೆ,ಚಿತ್ತೂರು ಪ್ರಭಾಕರ ಆಚಾಯ್,ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ ಆಚಾರ್ಯ ನಾವುಂದ,ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ,ಎಂಟು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.