ಶ್ರೀಲಕ್ಷ್ಮೀ ಜನಾರ್ಧನ ದೇವರಿಗೆ ಕರ್ಪೂರ ಸೇವೆ ಸಮರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜರ್ನಾಧನ ದೇವರ ರಥೋತ್ಸವ ಅಂಗವಾಗಿ ಓಕುಳಿ ಉತ್ಸವ ಹಾಗೂ ಶ್ರೀದೇವರ ಕರ್ಪೂರ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ಶ್ರೀಲಕ್ಷ್ಮೀ ಜನಾರ್ಧನ ದೇವರ ಸನ್ನಿಧಾನದಲ್ಲಿ ವಾರ್ಷಿಕವಾಗಿ ನಡೆಯುವ ಕರ್ಪೂರ ಸೇವೆ ಕಾರ್ಯಕ್ರಮದಲ್ಲಿ ಭಕ್ತರು ಭಾಗಿ ತಮ್ಮ ಹರಕೆಯನ್ನು ಸಲ್ಲಿಸಿದರು.ಕರ್ನಾಟಕ ರಾಜ್ಯದಲ್ಲೆ ಅತಿ ಹೆಚ್ಚು ಕರ್ಪೂರ ಸೇವೆ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ನಡೆಯುತ್ತದೆ.