ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿಗೆ ಸನ್ಮಾನ
ಕುಂದಾಪುರ:ಬೈಂದೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಗುರು ಕುಟುಂಬ ಸಮ್ಮಾನ್ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರಾದ ಶಶಿಧರ ಶೆಟ್ಟಿ ಮತ್ತು ದಂಪತಿಗಳನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಶುಭಹಾರೈಸಲಾಯಿತು.
ಬೈಂದೂರು ವಲಯ ಸಂಘದ ಅಧ್ಯಕ್ಷ ಶೇಖರ್,ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ,ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ ಮತ್ತು ಗಿರಿಜಾ ಮೊಗವೀರ,ಪದಾಧಿಕಾರಿಗಳಾದ ವಿಜಯ ಶೆಟ್ಟಿ,ರವಿ ಶೆಟ್ಟಿ,ಸುಬ್ರಹ್ಮಣ್ಯ ಡಿ,ಗಣೇಶ್ ಪೂಜಾರಿ,ರಾಘವೇಂದ್ರ ಡಿ,ನಿತ್ಯಾನಂದ,ದೈಹಿಕ ಶಿಕ್ಷಕ ಚಿತ್ತರಂಜನ್ ಶೆಟ್ಟಿ,ನಿವೃತ್ತ ಶಿಕ್ಷಕ ವೆಂಕಟರಮಣ.ಟಿ ಉಪಸ್ಥಿತರಿದ್ದರು.