ಮರವಂತೆ ಶಾಖೆ ಬ್ಯಾಂಕ್ ಮ್ಯಾನೇಜರ್ ರಾಹುಲ್ ಬಾಲಕೃಷ್ಣಗೆ ಶೃದ್ಧಾಂಜಲಿ ಸಲ್ಲಿಕೆ


ಕುಂದಾಪುರ:ಬ್ಯಾಂಕ್‍ನಿಂದ ಗ್ರಾಹರಿಗೆ ಸಿಗಬೇಕಾದಂತಹ ಸೌಲಭ್ಯಗಳನ್ನು ಯಾವುದೇ ರೀತಿ ಮುಚ್ಚು ಮರೆ ಇಲ್ಲದೆ ತುಂಬು ಉತ್ಸುಕತೆಯಿಂದ ನೀಡುವುದರ ಮೂಲಕ ನಿಯಮಗಳನ್ನು ಸಡಿಲಿಕೆ ಮಾಡಿಕೊಂಡು ಉತ್ತಮವಾದ ಸೇವೆಯನ್ನು ಜನರಿಗೆ ನೀಡುತ್ತಿದ್ದ ಮರವಂತೆ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್ ರಾಹುಲ್ ಬಾಲಕೃಷ್ಣ ಅವರ ಅಕಾಲಿಕ ಸಾವು ಮರವಂತೆ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತರಾದ ಎಸ್.ಜನಾರ್ದನ ಮರವಂತೆ ಹೇಳಿದರು.
ಕೆನರಾ ಬ್ಯಾಂಕ್ ಮರವಂತೆ ಶಾಖೆಯಲ್ಲಿ ಸೋಮವಾರ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅಕಾಲಿಕವಾಗಿ ನಿಧನರಾದ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಮರವಂತೆ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಖಾರ್ವಿ,ಮಾಜಿ ಅಧ್ಯಕ್ಷರಾದ ರುಕ್ಮಿಣಿ ಮತ್ತು ಅನಿತಾ ಆರ್.ಕೆ,ಸತೀಶ ಪೂಜಾರಿ,ದಯಾನಂದ ಬಳೆಗಾರ್,ರವಿ ಮಡಿವಾಳ,ಸುಬ್ರಹ್ಮಣ್ಯ ಪಡುಕೋಣೆ,ಮರವಂತೆ ಹೈಸ್ಕೂಲ್ ಮುಖ್ಯೋಪಾಧ್ಯಾಯ ಸರ್ವತ್ತೋಮ ಭಟ್,ಶಾಖಾ ಮ್ಯಾನೇಜರ್ ಸುಧೀರ್ ನುಡಿನಮನ ಸಲ್ಲಿಸಿದರು.ಬ್ಯಾಂಕ್ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ ಮರವಂತೆ ಶಾಖೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ಅವರು ಶನಿವಾರ ಅರಾಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.