ಆಲೂರು:ಕನ್ನಡ ಕಲರವ-2023 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಗ್ರಾಮೀಣ ಭಾರತ ಉಳಿಯಬೇಕಾದರೆ ಸ್ಥಳೀಯ ಭಾಷೆ ಮತ್ತು ಆಚಾರ ವಿಚಾರಗಳನ್ನು ಉಳಿಸುವಂತಹ ಕೆಲಸ ಮಾಡಬೇಕು.ಒಂದೊಂದು ಭಾಷೆ ಒಂದೊಂದು ರೀತಿಯ ಸ್ವಭಾವವನ್ನು ಹೊಂದಿದ್ದು ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆ ಆಗಿದೆ.ಭಾಷೆ ಎನ್ನುವುದು ಸಾಂಸ್ಕøತಿಕ ಅಸ್ತಿತ್ವದಿಂದ ಕೂಡಿದೆ ಹೊರತು ರಾಜಕೀಯ ಅಸ್ತಿತ್ವದಿಂದಲ್ಲ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಕಲ್ಪತರು ಕಲಾವಿದರು ಆಲೂರು ವತಿಯಿಂದ ಸರಸ್ವತಿ ವಿದ್ಯಾಲಯ ಆಲೂರು ಶಾಲೆಯಲ್ಲಿ ಬುಧವಾರ ನಡೆದ ಎರಡನೇ ವರ್ಷದ ಕನ್ನಡ ಕಲರವ-2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲೆ,ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕ ಭಾಷೆಯೊಳಗೆ ಸಂಯೋಜನೆಗೊಂಡಿದೆ,ಪಾರಂಪರಿಕ ಮತ್ತು ಆಧುನಿಕ ವ್ಯವಸ್ಥೆ ಅಡಿಯಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಸಾಕಷ್ಟು ಪ್ರಯತ್ನಗಳು ಬೇಕು.ಇಂದಿನ ಯುವಪೀಳಿಗೆಗೆ ಮಾತೃ ಭಾಷೆ ಬಗ್ಗೆ ಅಭಿಮಾನವನ್ನು ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಮಾಡಬೇಕು ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್.ಎನ್ ದೇವಾಡಿಗ ಮಾತನಾಡಿ,ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗ್ರಾಮೀಣ ಪ್ರದೇಶದ ಭಾಗದಲ್ಲಿ ಉಳಿಸಿ ಬೆಳೆಸುವಲ್ಲಿ ಆಲೂರು ಕಲ್ಪತರು ಕಲಾವಿದರ ತಂಡ ವಿಶೇಷವಾದ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ.ಅವರ ಕಾರ್ಯ ಇತರ ಸಂಘ,ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.


ಕಲ್ಪತರು ಕಲಾವಿದರು ಆಲೂರು ಅಧ್ಯಕ್ಷ ರಾಜೇಂದ್ರ ಶೆಟ್ಟಿ ಮತ್ತು ಸಂಚಾಲಕ ಸುನಿಲ್ ಕುಮಾರ್,ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಸಂಚಾಲಕ ಹೇಮಂತ್ ಪಾಲ್ ಶೆಟ್ಟಿ,ಆಲೂರು ಪಂಚಾಯಿತಿ ಸದಸ್ಯ ರವಿ ಶೆಟ್ಟಿ ಆಲೂರು ಉಪಸ್ಥಿತರಿದ್ದರು.ಹಿರಿಯ ಯಕ್ಷಗಾನ ಕಲಾವಿದ ಸುರೇಂದ್ರ ಆಲೂರು,ಮಾಜಿ ತಾ.ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ,ಶೈಲಜಾ ಶೆಟ್ಟಿ,ನಿವೃತ್ತ ಶಿಕ್ಷಕ ಎಸ್ ಉಡುಪ ಅವರು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಪ್ರವೀಣ್ ಕುಮಾರ್ ಶೆಟ್ಟಿ,ನಿವೃತ್ತ ಸೈನಿಕರಾದ ದಿನೇಶ್ ಆಚಾರ್ಯ,ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಉದಯ್ ಕುಮಾರ್ ಶೆಟ್ಟಿ,ಸಮಾಜ ಸೇವಕರಾದ ಹೆರಿಯ ಪೂಜಾರಿ,ಸುಧಾಕರ ದೇವಾಡಿಗ ಕಟ್ಟಿನಮಕ್ಕಿ,ರಘುರಾಮ ಕುಲಾಲ,ಅನೀಶ್ ಶೆಟ್ಟಿ,ವಿಠ್ಠಲ್ ಸುವರ್ಣ,ನವೀನ್ ಪೂಜಾರಿ ಹೊಯ್ಯಾಣ ಅವರನ್ನು ಸನ್ಮಾನಿಸಲಾಯಿತು.,ಆಶಾ ಕಾರ್ಯಕರ್ತೆಯರನ್ನು,ಮತ್ತು ಎಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ವೀಕ್ಷಿತಾ ಪೂಜಾರಿ,ರಕ್ಷಾ ಶೆಟ್ಟಿ ಅವರನ್ನು ಗೌರವಿಸಲಾಯಿತು.ಆರ್ಥಿಕ ನೆರವನ್ನು ವಿತರಿಸಲಾಯಿತು.ರಾಘವೇಂದ್ರ.ಡಿ ಆಲೂರು ಸ್ವಾಗತಿಸಿ,ನಿರೂಪಿಸಿದರು.ರಾಘು ರಟ್ಟಾಡಿ ವಂದಿಸಿದರು.
