ನಿವೃತ್ತ ಶಿಕ್ಷಕಿ ಜೂಲಿಯಟ್ ಒಲಿಂಪಿಯಾ ಲಾಜರಸ್‍ಗೆ ಬೀಳ್ಕೊಡುಗೆ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳಿಂದ ಸುದೀರ್ಘವಾಗಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿವೃತ್ತ ಶಿಕ್ಷಕಿ ಜೂಲಿಯಟ್ ಒಲಿಂಪಿಯಾ ಲಾಜರಸ್ ಅವರನ್ನು ಹೆಮ್ಮಾಡಿ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಈ ಸಂಧರ್ಭ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು,ಅತಿಥಿಗಳು ಉಪಸ್ಥಿತರಿದ್ದರು.