ರಾಮ ಮಂದಿರ ಉದ್ಘಾಟನೆಗೆ ಮೂಹೂರ್ತ ಫಿಕ್ಸ್,ಜನವರಿ ತಿಂಗಳಲ್ಲಿ ಉದ್ಘಾಟನೆ ಸಾಧ್ಯತೆ

Share

Advertisement
Advertisement
Advertisement

ಬೆಂಗಳೂರು:ಹಿಂದೂಗಳ ಕನಸಾದ ಅಯ್ಯೋಧ್ಯ ಶ್ರೀರಾಮ ದೇವರ ಮಂದಿರ ನಿರ್ಮಾಣಕ್ಕೆ ಮೂಹೂರ್ತ ಫಿಕ್ಸ್ ಆಗಿದ್ದು ಮುಂದಿನ ವರ್ಷ ಜನವರಿ 22 ರಂದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.ಅಯೋಧ್ಯೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ, ರಾಮ್ ಲಲ್ಲಾ ಅವರನ್ನ ಜನವರಿ 22, 2024ರಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಲಿದ್ದಾರೆ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದ್ದು. ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ನಡೆಯುತ್ತಿರುವ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ವಹಣಾ ಸಮಿತಿಯ ಉಸ್ತುವಾರಿಯನ್ನು ಆರ್‌ಎಸ್‌ಎಸ್ ನಾಯಕ ಭಯ್ಯಾಜಿ ಜೋಶಿ ವಹಿಸಿಕೊಳ್ಳಲಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.ಸಿಎಂ ಯೋಗಿ ಅವರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನ ಪರಿಶೀಲಿಸಿದ್ದರು.

ಶ್ರೀ ರಾಮ ಜನ್ಮಭೂಮಿ ಅಯ್ಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ದೇವಾಲಯದ ಮೊದಲ ಮಹಡಿ ಬಹುತೇಕ ಸಿದ್ಧವಾಗಿದೆ. ದೇವಾಲಯದ ಉದ್ಘಾಟನೆಯ ನಂತರ, ದೇವಾಲಯವನ್ನ ಎಲ್ಲಾ ಭಕ್ತರಿಗೆ ಶಾಶ್ವತವಾಗಿ ತೆರೆಯಲಾಗುತ್ತದೆ.ದೇವಾಲಯದಲ್ಲಿ 42 ಬಾಗಿಲುಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಸಣ್ಣ ಚಿನ್ನದ ಬಾಗಿಲನ್ನ ಸಹ ಸ್ಥಾಪಿಸಲಾಗುವುದು. ದೇವಾಲಯದ ಬಾಗಿಲುಗಳ ಮೇಲೆ ನವಿಲುಗಳು, ಪಾತ್ರೆಗಳು, ಚಕ್ರಗಳು ಮತ್ತು ಹೂವುಗಳನ್ನ ಕೆತ್ತಲಾಗುವುದು. ಗರ್ಭಗುಡಿಯಲ್ಲಿ ಭಗವಾನ್ ರಾಮನ ಎರಡು ಮಗುವಿನಂತಹ ವಿಗ್ರಹಗಳು ಇರುತ್ತವೆ. ಈ ವಿಗ್ರಹಗಳಲ್ಲಿ ಒಂದು ಚಲನಶೀಲವಾಗಿರುತ್ತದೆ ಮತ್ತು ಇನ್ನೊಂದು ಸ್ಥಿರವಾಗಿರುತ್ತದೆ. ಗರ್ಭಗುಡಿಯ ಗೋಡೆಗಳ ಮೇಲೆ ಬಿಳಿ ಅಮೃತಶಿಲೆಯನ್ನ ಇರಿಸಲಾಗುತ್ತದೆ.

Advertisement


Share

Leave a comment

Your email address will not be published. Required fields are marked *

You cannot copy content of this page