ಜನ್ಸಾಲೆ ಯಕ್ಷಯಾನ 25 ಬೆಳ್ಳಿ ಹಬ್ಬದ ಸಂಭ್ರಮ:ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ ಕಾರ್ಯಕ್ರಮ



ಕುಂದಾಪುರ:ಪರಮ ಪೂಜ್ಯ ಜಗದ್ಗುರು ಶ್ರೀಕಾಳ ಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ದಾನಿಗಳ ಮತ್ತು ಯಕ್ಷಾಭಿಮಾನಿಗಳ ಸಹಕಾರದಿಂದ ಜನ್ಸಾಲೆ ಯಕ್ಷಯಾನ 25 ಬೆಳ್ಳಿ ಹಬ್ಬದ ಸಂಭ್ರಮ ಮತ್ತು ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಉದ್ಘಾಟನಾ ಸಮಾರಂಭ ಸಕಲ ಕನ್ವೆನ್ಷನ್ ಹಾಲ್ ಆಲೂರು ಕ್ರಾಸ್ ಚಿತ್ತೂರು ಮಾರಣಕಟ್ಟೆಯಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಯಕ್ಷ ರಾಘವ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.
ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ವತಿಯಿಂದ 15 ಜನ ಯಕ್ಷಗಾನ ಕಲಾವಿದರಿಗೆ ಯಕ್ಷ ರಾಘವ ಕಲಾ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಅಶಕ್ತ 5 ಜನ ಯಕ್ಷಗಾನ ಕಲಾವಿದರಿಗೆ ಯಕ್ಷ ರಾಘವ ಆರ್ಥಿಕ ನೆರವನ್ನು ನೀಡಲಾಯಿತು ಮತ್ತು ಯಕ್ಷರಂಗದಲ್ಲಿ ವಿಶಿಷ್ಟವಾದ ಸಾಧನೆಯನ್ನು ಮಾಡಿದ 5 ಜನ ಯಕ್ಷಗಾನ ಕಲಾವಿದರಿಗೆ ಯಕ್ಷ ರಾಘವ ಪ್ರತೀಕ್ಷಾ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾ ಪೋಷಕ ಕೃಷ್ಣಮೂರ್ತಿ ಮಂಜರು ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಯಾರು ಯಾರನ್ನು ಮೇಲ್ಕಕೆ ತರಲು ಸಾಧ್ಯವೆ ಇಲ್ಲಾ,ಅವರಿಗೆ ಮೇಲೆ ಬರಲು ಅದೃಷ್ಟ ಮಾತ್ರ ಬೇಕು,ಯಾರನ್ನು ಕೇಳಗೆ ತುಳಿಯಲು ಸಾಧ್ಯವಿಲ್ಲ,ಗ್ರಹಚಾರ ಕೆಟ್ಟಾಗ ಮಾತ್ರ ಕೇಳಗೆ ಬೀಳಲು ಸಾಧ್ಯ.25 ವರ್ಷಗಳ ಕೆಳಗೆ ಒಬ್ಬ ಸಣ್ಣ ಹುಡುಗ ತಾಳ ಹಿಡಿದು ಕುಳಿತುಕೊಂಡ ವ್ಯಕ್ತಿ ಈ ಮಟ್ಟಕ್ಕೆ ಬೆಳೆದಿರುವುದು ಅವರ ಪ್ರತಿಭೆಗೆ ಮನ್ನಣೆ ಸಿಕಿದ್ದ ಸಂದರ್ಭ ಇದು ಆಗಿದೆ ಎಂದರು.
ತೆಂಕುತಿಟ್ಟಿನ ಶ್ರೇಷ್ಠ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ,ಜನ್ಸಾಲೆ ಅವರು ನಮಗೆಲ್ಲ ಗೊತ್ತಿರುವಾ ಹಾಗೆ ಒಳ್ಳೆ ಭಾಗವತರು ಹೌದು, ಹೃದಯವಂತಿಕೆಯಿಂದ ಪ್ರತಿಷ್ಠಾನವನ್ನು ಆರಂಭಿಸಿ ಸಮಾಜ ಮುಖಿಯಾಗಿ ಕಲಾವಿದರಿಗೆ ತನ್ನಿಂದ ಏನಾದರೂ ಸಹಕಾರ ಆಗಬೇಕ್ಕೆನ್ನುವ ನಿಟ್ಟಿನಲ್ಲಿ ಜನ್ಸಾಲೆ ಅವರು ಬಹಳ ಉತ್ತಮ ರೀತಿಯಲ್ಲಿ ಇವೊಂದು ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದಾರೆ.ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಾನ ಈಗಾಗಲೇ ಉದ್ಘಾಟನೆ ಗೊಂಡಿದೆ,ಯಕ್ಷಗಾನದ ಕಲಾವಿದರು ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಎಲ್ಲರನ್ನು ಒಟ್ಟಿಗೆ ಸೇರಿಸಿ ಯಾರು ಯಕ್ಷಗಾನದಲ್ಲಿ ಅಶಕ್ತರು ಇಲ್ಲ ಎನ್ನುವ ರೀತಿಯಲ್ಲಿ ಯಕ್ಷಗಾನವನ್ನು ಬೆಳೆಸಬೇಕು ಜನ್ಸಾಲೆಗೆ ಅವರಿಗೆ ಶುಭವಾಗಲಿ ಎಂದು ಹೇಳಿದರು.ಜನ್ಸಾಲೆ ಪ್ರತಿಷ್ಠಾನ ಇನ್ನಷ್ಟು ಉತ್ತುಂಗಕ್ಕೆ ಎರಲಿ ಎಂದು ಹಾರೈಸಿದರು.

ಕಲಾ ಪೋಷಕ ಉದ್ಯಮಿ ಅಶೋಕ ಶೆಟ್ಟಿ ಬೆಳ್ಳಾಡಿ ಮಾತನಾಡಿ,ರಾಘವೇಂದ್ರ ಜನ್ಸಾಲೆ ಅವರ ಕನಸಿನ ಯೋಜನೆಗೆ ಇಂದು ಅಧಿಕೃತ ಚಾಲನೆ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ.ಕಲಾವಿದರನ್ನು ಪ್ರೋತ್ಸಾಹಹಿಸುವ ನಿಟ್ಟಿನಲ್ಲಿ ಆರಂಭಿಸಿರುವ ಇವೊಂದು ಪ್ರತಿಷ್ಠಾನಕ್ಕೆ ಶುಭವಾಗಲಿ,ನೂರಾರು ವರ್ಷಗಳ ಕಾಲ ಬೆಳೆಯಲಿ ಎಂದು ಹಾರೈಸಿದರು.
ಬಡಗುತಿಟ್ಟಿನ ಖ್ಯಾತ ಭಾಗವತರಾದ ಜನ್ಸಾಲೆ ಪ್ರತಿಷ್ಠಾನದ ಅಧ್ಯಕ್ಷರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಮಾತನಾಡಿ, ಕಲಾವಿದರಿಗೆ ನೆರವನ್ನು ನೀಡುವ ದೃಷ್ಟಿಯಿಂದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನವನ್ನು ಹುಟ್ಟು ಹಾಕಲಾಗಿದೆ,ಪ್ರತಿಷ್ಠಾನದ ವತಿಯಿಂದ 26 ಜನರಿಗೆ ಗೌರವ ಸನ್ಮಾನ ಮತ್ತು ಆರ್ಥಿಕ ನೆರವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಕಲಾಭಿಮಾನಿಗಳ ಪ್ರೋತ್ಸಾಹ ಮುಖ್ಯ ಎಂದು ಕೇಳಿಕೊಂಡರು. ಸೆ.24 ಎನ್ನುವುದು ತನ್ನ ಜೀವನದ ಅತ್ಯುನ್ನತವಾದ ದಿನವಾಗಿದೆ ಯಕ್ಷಗಾನ ರಂಗಭೂಮಿಯಲ್ಲಿ 25 ವರ್ಷ ಸೇವೆ ಸಲ್ಲಿಸಿ 25ರ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆದಿದೆ ಎಂದು ಮಾಧ್ಯಮದವರ ಜೊತೆ ಸಂತೋಷವನ್ನು ಹಂಚಿಕೊಂಡರು.


ನಾಡೋಜ ಜಿ.ಶಂಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಯಕ್ಷಗಾನ ಇಲ್ಲಿಗೆ ಮುಗಿಯ ಬಾರದು ಅದೊಂದು ಒಳ್ಳೆ ಸಂಸ್ಕಾರವಾಗಿದೆ ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡಬೇಕು ದಾನಿಗಳು ಜನ್ಸಾಲೆ ಅವರ ಪ್ರತಿಷ್ಠಾನಕ್ಕೆ ಸಹಕಾರವನ್ನು ನೀಡಬೇಕು.ಇಬ್ಬರು ಶ್ರೇಷ್ಠ ಕಲಾವಿದರ ಹೃದಯವಂತಿಕೆ ಶ್ರೀಮಂತಿಕೆಯಿಂದ ಒಳ್ಳೆ ಕಾರ್ಯಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.ಈ ಟ್ರಸ್ಟ್ ಮುಂದುವರಿಯ ಬೇಕು ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದರು.

ಈ ಸಂದರ್ಭ ಪುರುಷೋತ್ತಮ ಶೆಟ್ಟಿ,ವೈ ಕರುಣಾಕರ ಶೆಟ್ಟಿ ,ಸದಾಶಿವ ಶೆಟ್ಟಿ ಧರ್ಮದರ್ಶಿ ಮಾರಣಕಟ್ಟೆ,
ಮಂಜಯ್ಯ ಶೆಟ್ಟಿ ಚಿತ್ತೂರು,ಜಯರಾಮ್ ಶೆಟ್ಟಿ ವಂಡಬಳ್ಳಿ,ಸುಧೀರ್ ಕುಮಾರ್ ಶೆಟ್ಟಿ ವಂಡ್ಸೆ,ಡಾ ಜಗದೀಶ್ ಶೆಟ್ಟಿ, ಕರುಣಾಕರ ಶೆಟ್ಟಿ,ಶಂಕರ್ ಭಟ್,ಚಂದ್ರಯ್ಯ ಆಚಾರ್ಯ ಆಲೂರು ಕಳಿ,ಅಭಿನಂದನಾ ನುಡಿ ಪ್ರೊ| ಪವನ್ಕಿರಣಕೆರೆ ಪ್ರಸಂಗಕರ್ತರು,ಚಿತ್ತೂರು ಪ್ರಭಾಕರ ಆಚಾರ್ಯ,ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.