ಹೋಮ ಯಾಗದಲ್ಲಿ ಭಾಗಿಯಾದ ವಾನರ ರೂಪಿ ಹನುಮ

ಬೆಂಗಳೂರು:ಗದಗ ಜಿಲ್ಲೆ ಲಕ್ಷ್ಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ನಡೆದ ಹೋಮ ಯಾಗದಲ್ಲಿ ವಾನರ ರೂಪಿ ಹನುಮ ಭಾಗಿಯಾಗಿದ್ದಾನೆ.
ರಾಮ ಪ್ರಾಣ ಪ್ರತಿಷ್ಠಾಪನೆ ದಿನದ ಅಂಗವಾಗಿ ಯಾಗ ಆಯೋಜಿಸಲಾಗಿತ್ತು.ಆ ವೇಳೆ ಪ್ರತ್ಯಕ್ಷನಾದ ಕೋತಿ ಯಾಗ ವಿಧಿಗಳನ್ನ ವೀಕ್ಷಿಸುತ್ತ ಕುಳಿತಿದೆ. ಗದಗದ ಯೋಗ ತಂಡದಿಂದ ದೇವಸ್ಥಾನದಲ್ಲಿ ಅಗ್ನಿಹೋತ್ರ ಹೋಮ ಆಯೋಜಿಸಲಾಗಿತ್ತು. ಹೋಮ ಆರಂಭವಾಗುತ್ತಿದ್ದಂತೆ ಕೋತಿ ಸ್ಥಳಕ್ಕೆ ಹಾಜರಾಗಿದೃ.ಸುತ್ತಲು ಜನ ಕೂತಿದ್ದರೂ ಯಾಗದ ಸ್ಥಳಕ್ಕೆ ದೌಡಾಯಿಸಿದ ವಾನರ ಕೆಲವು ಸಮಯದ ವರೆಗೆ ಪೂಜೆಯಲ್ಲಿ ಪಾಲ್ಗೊಂಡಿತ್ತು.