ಮಂತ್ರಾಕ್ಷತೆಯ ಬೃಹತ್ ಮೆರವಣಿಗೆ


ಬೈಂದೂರು:ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನಿಗೆ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಹಾಗೂ ಮರವಂತೆ ಶ್ರೀರಾಮ ಮಂದಿರದಲ್ಲಿ ಪೂಜಿಸಿದ ಮಂತ್ರಾಕ್ಷತೆಯನ್ನು ಪೂರ್ಣ ಕುಂಭದೊಂದಿಗೆ ವಿವಿಧ ಭಜನಾ ತಂಡ,ಕುಣಿತ ಭಜನೆ,ಚಂಡೆ ವಾದನದೊಂದಿಗೆ ಮರವಂತೆ ಶ್ರೀರಾಮ ಮಂದಿರ ದಿಂದ ನಾವುಂದ ಮಾಂಗಲ್ಯ ಮಂಟಪದ ವರೆಗೆ ಭವ್ಯ ಮೆರವಣಿಗೆ ಭಾನುವಾರ ನಡೆಯಿತು.
ಮೆರವಣಿಗೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ರಾಮಕೃಷ್ಣ ಆಶ್ರಮ ಪರಮ ಪೂಜ್ಯ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿಗಳು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಮಂತ್ರಾಕ್ಷತೆಯನ್ನು ವಿತರಿಸಿದರು.