ಬಸ್ ಬೈಕ್ ಡಿಕ್ಕಿ ಪೌರಕಾರ್ಮಿಕರ ಸಾವು

ಕುಂದಾಪುರ:ಹಂಗಳೂರು ಬಳಿ ಗುರುವಾರ ರಾತ್ರಿ ಸಂಭವಿಸಿದ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿಪೌರಕಾರ್ಮಿಕ ಸಾವನ್ನಪ್ಪಿದ್ದಾರೆ.ಅಪಘಾತದ ತೀವ್ರತೆಗೆ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಖ್ಯಾತ ನಿರೂಪಕಿ ಅಪರ್ಣಾ ನಿಧನ

ಬೆಂಗಳೂರು:ಕನ್ನಡ ಚಲನಚಿತ್ರ ರಂಗದ ಜನಪ್ರಿಯ ಚಿತ್ರ ನಟಿ ಮತ್ತು ಖ್ಯಾತ ನಿರೂಪಕಿ ಅಪರ್ಣಾ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ.ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.ತನ್ನ ವಿಭಿನ್ನ ಶೈಲಿಯ ನಿರೂಪಣೆ ಯೊಂದಿಗೆ ಕನ್ನಡ ನಾಡಿನಲ್ಲಿ ಮನೆ ಮಾತಾಗಿದ್ದರು.

ಚಂದ್ರಶೇಖರ ಶೆಟ್ಟಿ ದೈಹಿಕ ಶಿಕ್ಷಣ ಜಿಲ್ಲಾ ಅಧಿಕಾರಿ ಆಯ್ಕೆ

ಕುಂದಾಪುರ:ಬೈಂದೂರು ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಚಂದ್ರಶೇಖರ ಶೆಟ್ಟಿ ಅವರು ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಜಿಲ್ಲಾ ಅಧಿಕಾರಿಯಾಗಿ ಪದನ್ನೋತಿಗೊಂಡಿದ್ದಾರೆ.

You cannot copy content of this page