ಕನ್ನಡ ಶಿಕ್ಷಕರ ವರ್ಗಾವಣೆ ಖಂಡಿಸಿ ಪಡುಕೋಣೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Share

Advertisement
Advertisement
Advertisement


ಕುಂದಾಪುರ:ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಬಾರದೆಂದು ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಭೆ ನಡೆಸಿ ನಿರ್ಣಯ ಮಾಡಿ ಹಲವಾರು ಮನವಿಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರು ನಮ್ಮ ಮನವಿಯನ್ನು ಪರಿಗಣಿಸದೆ ಏಕಾಏಕಿ ಆಗಿ ನಮ್ಮ ಶಾಲೆಯಿಂದ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.ಕನ್ನಡ ಶಾಲೆಯಲ್ಲಿ ಕನ್ನಡ ಶಿಕ್ಷರನ್ನು ವರ್ಗಾವಣೆ ಮಾಡುವುದರ ಮುಖೇನ ಅವೈಜ್ಞಾನಿಕವಾದ ಕ್ರಮವನ್ನು ಶಿಕ್ಷಣ ಇಲಾಖೆ ಜಾರಿ ಮಾಡಿದೆ ಎಂದು ಪಡುಕೋಣೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ ಆಪಾದಿಸಿದರು.
ಶಿಕ್ಷಣ ಇಲಾಖೆಯ 2021-2022ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಯ ನಿಯಮದ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಪಡುಕೋಣೆ ಶಾಲೆಯ ಕನ್ನಡ ಶಿಕ್ಷಕರನ್ನು ಹೆಚ್ಚುವರಿ ಆಧಾರದ ಮೇಲೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯ ಎಸ್‍ಡಿಎಂಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.


2104 ರಿಂದ ನಮ್ಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯರೆ ಇಲ್ಲ ಇವತ್ತಿನ ವರೆಗೂ ಮುಖ್ಯ ಶಿಕ್ಷಕರನ್ನು ನೇಮಕ ಮಾಡದೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಹೆಚ್ಚುವರಿ ಆಧಾರದಲ್ಲಿ ನಮ್ಮ ಶಾಲೆಯ ಶಿಕ್ಷಕರನ್ನು ಇನ್ನೊಂದು ಶಾಲೆಗೆ ವರ್ಗಾವಣೆ ಮಾಡಲಾಗಿದೆ.59 ಮಕ್ಕಳನ್ನು ಹೊಂದಿರುವ ನಮ್ಮ ಶಾಲೆಯಲ್ಲಿ ಕೇವಲ ನಾಲ್ಕು ಶಿಕ್ಷಕರು ಮಾತ್ರ ಭೋಧನೆಯನ್ನು ಮಾಡುತ್ತಿದ್ದಾರೆ ಹೀಗಾದರೆ ಶಿಕ್ಷಣದ ಗುಣಮಟ್ಟ ಕುಸಿದು ಹೋಗಿ ಮಕ್ಕಳ ಭವಿಷ್ಯ ಹಾಳಾಗುವುದರ ಜತೆಗೆ ಶಾಲೆ ಸಹ ಮುಚ್ಚುವಂತಹ ಪರಿಸ್ಥಿತಿ ಬರಲಿದೆ ಎಂದರು.ನಿಯಮದ ಪ್ರಕಾರ ಬೇರೆ ಶಾಲೆಗಳಲ್ಲಿ ಶಿಕ್ಷಕರನ್ನು ಉಳಿಸಿಕೊಳ್ಳಲಾಗಿದೆ ಒಂದೊಂದು ಶಾಲೆಗೆ ಒಂದೊಂದು ರೀತಿ ನಿಯಮವನ್ನು ಇಲಾಖೆ ಜಾರಿಗೆ ಮಾಡಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬದುಕು ಏನಾಗಬಹುದು ಎಂದು ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಜ್ಯೋತಿ,ಉಪಾಧ್ಯಕ್ಷೆ ಪೂರ್ಣಿಮಾ,ಕಾರ್ಯದರ್ಶಿ ಕಿರಣ್ ಗಾಣಿಗ ಉಪಸ್ಥಿತರಿದ್ದರು.ಕನ್ನಡ ಶಿಕ್ಷಕರನ್ನು ಹೆಚ್ಚುವರಿ ಆಧಾರದಲ್ಲಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೆÇೀಷಕರು ಶಿಕ್ಷರಕರ ವರ್ಗಾವಣೆಯನ್ನು ತಡೆ ಹಿಡಿಯುವಂತೆ ಘೋಷಣೆಯನ್ನು ಕೂಗಿದರು.ಸಂಬಂಧಪಟ್ಟ ಇಲಾಖೆಗೆಗೆ ಮನವಿಯನ್ನು ಸಲ್ಲಿಸಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page