ಶೆಡ್ ಮೇಲೆ ಮರ ಬಿದ್ದು ಹಾನಿ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕೊಪ್ಪರಿಗೆ ಬೆಟ್ಟು ನಿವಾಸಿ ಮಂಜು ಪೂಜಾರ್ತಿ ಅವರ ಅಡುಗೆ ಮನೆ ಮೇಲೆ ಮರ ಬಿದ್ದು ಸಂಪೂರ್ಣವಾಗಿ ಹಾನಿ ಆಗಿದೆ.ಮನೆಗೆ ಸಂಪರ್ಕಿಸುವ ವಿದ್ಯುತ್ ಲೈನ್ ತುಂಡಾಗಿದೆ.ಘಟನೆಯಲ್ಲಿ ಅಂದಾಜು 25,000.ರೂ ನಷ್ಟ ಸಂಭವಿಸಿದೆ.