ಗಂಗೊಳ್ಳಿ:ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಲೈಟ್ ಹೌಸ್ ಗದ್ದೆಮನೆ ನರಸಿಂಹ ಪೂಜಾರಿ ಅವರ ವಾಸ್ತವದ ಮನೆ ಸಮೀಪ ಸುಮಾರು 11 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಬುಧವಾರ ಪತ್ತೆಯಾಗಿದೆ.ಜನವಸತಿ ಪ್ರದೇಶದಲ್ಲಿ ಅವಿತುಕೊಂಡಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಗಸ್ತು ಅರಣ್ಯ ಪಾಲಕ ಆನಂದ ಬಳೆಗಾರ ಮತ್ತು ಸ್ಥಳೀಯರಾದ ಗಣೇಶ ಖಾರ್ವಿ,ವಿಶ್ವನಾಥ ಗಂಗೊಳ್ಳಿಸುಂದರ.ಪಿ.ನಾಗೇಂದ್ರಮಡಿ ನಾಗರಾಜ ಖಾರ್ವಿ,ವಿಶ್ವನಾಥ ಪೂಜಾರಿ,ರತ್ನಾಕರ ಪೂಜಾರಿ ಸಂದೀಪ ಪೂಜಾರಿ,ರಾಜು ಪೂಜಾರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.