ಲಯನ್ಸ್ ಕ್ಲಬ್ ನಾವುಂದ ಪದಗ್ರಹಣ ಕಾರ್ಯಕ್ರಮ
ಕುಂದಾಪುರ:ಸಂಘಟನೆಗಳು ಪ್ರಾಮಾಣಿಕ,ಸತ್ಯ,ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಲಯನ್ಸ್ ದ್ವಿತೀಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ ಹೇಳಿದರು.ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಅರೆಹೊಳೆ ಮಹಾಲಸಾ ಸಭಾಭವನದಲ್ಲಿ ನಡೆದ ಕ್ಲಬ್ಬಿನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಅವರು ಮಾತನಾಡಿದರು.
ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.ಲಯನ್ಸ್ ಜಿಲ್ಲಾ ಪೂರ್ವ ಗವರ್ನರ್ ವಿಶ್ವನಾಥ ಶೆಟ್ಟಿ,ವಲಯಾಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು,ಪ್ರಾಂತೀಯ ಅಧ್ಯಕ್ಷ ಏಕನಾಥ ಬೋಳಾರ್,ಕಾರ್ಯದರ್ಶಿ ಭೋಜರಾಜ ಶೆಟ್ಟಿ,ಗ್ಲೋಬಲ್ ಮೆಂಬರ್ ಜಿಲ್ಲಾ ಸಂಪರ್ಕಾಧಿಕಾರಿ ಅರುಣಕುಮಾರ್ ಹೆಗ್ಡೆ,ವಿಸ್ತರಣಾಧಿಕಾರಿ ವಿಶ್ವನಾಥ ಶೆಟ್ಟಿ ಗಾಯಾಡಿ,ದಿನೇಶ ಆಚಾರ್,ಸಮರ್ ಶೆಟ್ಟಿ,ನಾವುಂದ ಕ್ಲಬ್ಬಿನ ಖಜಾಂಚಿ ರಮೇಶ ಮೊಗವೀರ ಉಪಸ್ಥಿತರಿದ್ದರು.ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಗೆ ನಗದು ಪುರಸ್ಕಾರ ನೀಡಲಾಯಿತು.ಸ್ಥಳೀಯ ಎರಡು ಸರಕಾರಿ ಶಾಲೆಗಳಗೆ ಶೈಕ್ಷಣಿಕ ಧನಸಹಾಯ ನೀಡಲಾಯಿತು.ಚಲನಚಿತ್ರ ನಿರ್ದೇಶಕ ನಾಗರಾಜ ಅರೆಹೊಳೆ ಹಾಗೂ ಲಯನ್ಸ್ ದ್ವಿತೀಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ ಅವರನ್ನು ಸನ್ಮಾನಿಸಲಾಯಿತು.ಮೂವರು ಹೊಸ ಸದಸ್ಯರು ಕ್ಲಬ್ಬಿಗೆ ಸೇರ್ಪಡೆಯಾದರು.ಶಶಿಧರ ಶೆಟ್ಟಿ ನಿರೂಪಿಸಿದರು.ನಾವುಂದ ಕ್ಲಬ್ಬಿನ ಕಾರ್ಯದರ್ಶಿ ಅಶೋಕ ವಿ.ಆಚಾರ್ ವಂದಿಸಿದರು.
(ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಉಡುಪಿ ಜಿಲ್ಲಾ ವತಿಯಿಂದ ಉಡುಪಿಯಲ್ಲಿ ನಡೆದ ತೇಜಸ್ ಮಹಾಬಲ ಡಿಸ್ಟ್ರಿಕ್ಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಮಾಜ ಸೇವಾ ಕೆಲಸದ ಮೂಲಕ ಗುರುತಿಸಿಕೊಂಡಿದ್ದ ಜೋನ್ ಚೇರ್ ಪರ್ಸನ್ ಲಯನ್ ನರಸಿಂಹ ದೇವಾಡಿಗ ಅವರಿಗೆ ತೇಜಸ್ ಡೈಮಂಡ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು)




















































































































































































































































































































































































































































































































































































































































































































































































































































































































































































































































































































































































































































































































































































































































































