ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ವಾರ್ಷಿಕ ಮಹಾಸಭೆ:50 ಲಕ್ಷ.ರೂ ಲಾಭ,14% ಡಿವಿಡೆಂಡ್ ಘೋಷಣೆ

Share

Advertisement
Advertisement

ಕುಂದಾಪುರ:ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ಅದರ 2023-24ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ತಲ್ಲೂರು ಜೈ ದುರ್ಗಾ ಮಾತಾ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿರುವ ಭರತ್ ಬಾಬು ದೇವಾಡಿಗ‌ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಸಿಇಒ ವಿಶಾಲ ದೇವಾಡಿಗ ವಾರ್ಷಿಕ ವರದಿ ಮಂಡಿಸಿ ಸದಸ್ಯರಿಂದ ಅನುಮೋದನೆಯನ್ನು ಪಡೆದು ಕೊಂಡರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಹರ್ಕೂರು ಮಾತನಾಡಿ,ಸ್ವ ಸಹಾಯ ಸಂಘಗಳನ್ನು ಹುಟ್ಟು ಹಾಕುವುದರ ಮೂಲಕ ಸಮುದಾಯದ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ತುಂಬುವ ಕೆಲಸ ಸಂಘದ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ.ಅನಾರೋಗ್ಯಕ್ಕೆ ಒಳಗಾದ ಸಂಘದ ಸದಸ್ಯರಿಗೆ
ವೈದ್ಯಕೀಯ ನೆರವು ಹಾಗೂ ಅಕಾಲಿಕವಾಗಿ ಮೃತಪಟ್ಟ ವರಿಗೆ ಸಹಾಯಧನ ನೀಡಲಾಗಿದ್ದು.ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಾ ಬರಲಾಗುತ್ತಿದೆ.ಸಂಘದ ಅಭಿವೃದ್ಧಿಗೆ ನಿರ್ದೇಶಕ ಮಂಡಳಿ ಮತ್ತು ಸದಸ್ಯರು ಸದಾ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸಂಘದ ಬೆಳವಣಿಗೆಗೆ ಸ್ವ ಸಾಹಯ ಸಂಘದ ಸದಸ್ಯರ ಕೊಡುಗೆ ಅಪಾರವಾದದ್ದು ಎಂದು ಶ್ಲಾಘಿಸಿದರು.
ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ರಾಜೇಶ್ ದೇವಾಡಿಗ ತ್ರಾಸಿ ಮಾತನಾಡಿ,2011 ರಲ್ಲಿ ಆರಂಭ ಗೊಂಡಿರುವ ನಮ್ಮ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದ್ದು, ನಾಗೂರು ಮತ್ತು ಚಿತ್ತೂರಿನಲ್ಲಿ ಎರಡು ಹೊಸ ಶಾಖೆಗಳನ್ನು ಹೊಂದಿದೆ.ಕಳೆದ ಸಾಲಿನ ವರದಿ ವರ್ಷದಲ್ಲಿ 20 ಲಕ್ಷ.ರೂ ಲಾಭ ಗಳಿಸಿದ ನಮ್ಮ ಸಂಸ್ಥೆ ಈ‌ ವರ್ಷ 50 ಲಕ್ಷ.ರೂ ಲಾಭ ಗಳಿಸಿದೆ.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 14% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸ್ವ ಸಾಹಯ ಸಂಘದ ಸದಸ್ಯರಿಗೆ 10 ಕೋಟಿ.ರೂ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ ನಾಡ,ನಿರ್ದೇಶಕರಾದ ಎಮ್. ಸಂಜೀವ ದೇವಾಡಿಗ ತಲ್ಲೂರು,ಬಾಬು ದೇವಾಡಿಗ‌ ಹೆಮ್ಮಾಡಿ,ಬಸವ ದೇವಾಡಿಗ ಉಪ್ಪಿನ ಕುದ್ರು,ಕುಷ್ಟ ದೇವಾಡಿಗ ಹಟ್ಟಿಯಂಗಡಿ, ರಾಜೇಶ್ ದೇವಾಡಿಗ ತ್ರಾಸಿ,ಶಾರದಾ ದೇವಾಡಿಗ ನಾಗೂರು,ಶೀಲಾವತಿ ದೇವಾಡಿಗ ಪಡುಕೋಣೆ, ಜಯಂತಿ ದೇವಾಡಿಗ ಬಡಾಕೆರೆ,ಸುಮ ದೇವಾಡಿಗ ಹೆಮ್ಮಾಡಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲ ದೇವಾಡಿಗ
ಸ್ವಾಗತಿಸಿದರು.ದೀಪಿಕಾ ಎನ್ ದೇವಾಡಿಗ ನಿರೂಪಿಸಿದರು.ಶೀಲಾವತಿ ದೇವಾಡಿಗ ವಂದಿಸಿದರು.

Advertisement
Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page