ಬೈಂದೂರು ಕ್ಷೇತ್ರದಲ್ಲಿ ಮತದಾನ ಆರಂಭ,ಮತಗಟ್ಟೆಗೆ ಆಗಮಿಸಿದ ಮತದಾರರು

ಕುಂದಾಪುರ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನ ಕ್ಷೇತ್ರ ವ್ಯಾಪ್ತಿಯ ನಾನಾ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಲ್ಲಿ 43 ಸೂಕ್ಷ್ಮ ಮತಗಟ್ಟೆಗಳನ್ನಾಗಿ ಪರಿಗಣಿಸಲಾಗಿದೆ.ಎಲ್ಲಾ ಸಾಮಾನ್ಯ ಮತಗಟ್ಟೆಯಲ್ಲಿ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.ಎಲ್ಲಾ ಮತಗಟ್ಟೆಗಳನ್ನು 16 ವಲಯ ಗಳಾಗಿ ವರ್ಗೀಕರಿಸಲಾ ಗಿದ್ದು,ಪ್ರತಿ ವಲಯದ ಮೇಲ್ವಿಚಾರಣೆಗೆ ಎಸ್ಸೈಗಳನ್ನು ನಿಯೋಜಿಸ ಲಾಗಿದೆ.16 ವಲಯಗಳನ್ನು ಪೊಲೀಸ್ ನಿರೀಕ್ಷಕರ ಶ್ರೇಣಿಯ ಮೂವರು ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.ಮೇಲ್ವಿಚಾರಣಾ ಅಧಿಕಾರಿಗಳ ಬಗ್ಗೆ ಇಬ್ಬರು ಡಿವೈಎಸ್ಪಿಗಳು ನಿಗಾ ವಹಿಸಲಿದ್ದಾರೆ.
ಮತಗಟ್ಟೆಗಳನ್ನು ವಿಶೇಷವಾದ ರೀತಿಯಲ್ಲಿ ಅಲಂಕಾರ ಮಾಡಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.
ಜನರು ಆಸಕ್ತಿಯಿಂದ ಮತ ಕೇಂದ್ರಕ್ಕೆ ಗಮನಿಸಿ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಹಾಕುವುದರ ಮುಖೇನ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ವಯೋವೃದ್ಧರು,ಅನಾರೋಗ್ಯ ಪೀಡಿತರು,ಅಂಗವೀಕಲರು, ವಿಶೇಷ ಚೇತನ ವ್ಯಕ್ತಿಗಳು ಮತದಾನ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡಿದ್ದಾರೆ.
ಬೆಳಗಿನಿಂದಲೇ ಜನರು ಮತಗಟ್ಟೆ ಕಡೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತವನ್ನು ಹಾಕಿದರು.ಯುವ ಮತದಾರರು ಸೇಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.ಮತದಾನ ಮಾಡಿದವರು ಮತಗಟ್ಟೆ ತೆರಳಿ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು.ಶೇಕಡಾ ನೂರು ಮತದಾನ ಆಗುವಂತೆ ನೋಡಿಕೊಳ್ಳಬೇಕಾಗಿದೆ.