ಮರವಂತೆ:ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ-ಆಗಸ್ಟ್.16 ಕ್ಕೆ
ಕುಂದಾಪುರ:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮರವಂತೆ ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜುಲೈ.17 ರಂದು ನಡೆಯಲಿದೆ ಎಂದು ಕೆಲವು ಕ್ಯಾಲೆಂಡರ್‍ಗಳಲ್ಲಿ ತಪ್ಪಾಗಿ ನಮೂದಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು.ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ದೇವಳದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಎಂ.ನಾಯಕ್,ಮರವಂತೆ ಶ್ರೀವರಾಹ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ನಡೆಯಲಿದೆ,ಭಕ್ತರು ಸಹಕರಿಸಬೇಕೆಂದು ಕೇಳಿಕೊಂಡಿದ್ದಾರೆ.
ರೈತಾಪಿ ವರ್ಗದ ಜನರು ಮಳೆ ದೇವರೆಂದು ಶ್ರೀವರಾಹ ಸ್ವಾಮಿ ದೇವರನ್ನು ಪೂಜಿಸುತ್ತಾರೆ.
ಶ್ರೀ ಮನ್ನಾರಾಯಣನ ದಶ ಅವತಾರಗಳಲ್ಲಿ ಒಂದಾದ ಶ್ರೀವರಾಹ,ವಿಷ್ಣು,ನಾರಸಿಂಹ ಸ್ವರೂಪದಲ್ಲಿ ಉದ್ಭವಿಸಿ ಸೌಪರ್ಣಿಕಾ ನದಿ ಮತ್ತು ಅರಬಿ ಸಮುದ್ರದ ತಟದ ಮಧ್ಯದಲ್ಲಿ ನೆಲೆನಿಂತು ಭಕ್ತರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಕೆ ಮಾಡುವ ಶ್ರೀ ದೇವರ ಸನ್ನಿಧಾನದಲ್ಲಿ ಕರ್ಕಾಟಕ ಅಮಾವಾಸ್ಯೆ ದಿನದಂದು ವಾರ್ಷಿಕ ಜಾತ್ರೆ ನೆರವೇರುತ್ತದೆ.ಸಹಸ್ರಾರು ಭಕ್ತರು,ರೈತಾಪಿ ವರ್ಗದವರು ಮತ್ತು ಮೀನುಗಾರರು ಹಾಗೂ ನವಜೋಡಿಗಳು ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನ ಮಾಡಿ,ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡಿ ದೇವರಿಗೆ ಪೂಜೆಯನ್ನು ಸಲ್ಲಿಸುವುದು ವಾಡಿಕೆ ಆಗಿದೆ.ರೈತಾಪಿ ವರ್ಗದ ಜನರು ಮಳೆ ದೇವರೆಂದು ಶ್ರೀವರಾಹ ಸ್ವಾಮಿ ದೇವರನ್ನು ಪೂಜಿಸುತ್ತಾರೆ.
(ಮರವಂತೆ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ಸಂಪ್ರದಾಯ ಬದ್ಧವಾಗಿ ನಡೆಯಲಿದೆ)
