ಗುಜ್ಜಾಡಿ ಶಾಲೆ:ಮುದ್ದು ಕೃಷ್ಣ,ಮುದ್ದು ರಾಧೆ ಸ್ಪರ್ಧೆ

ಕುಂದಾಪುರ:ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುದ್ದು ಕೃಷ ಮುದ್ದು ರಾಧೆ ಸ್ಪರ್ಧೆ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಂಘದ ಗೌರವಾಧ್ಯಕ್ಷ ಪ್ರಕಾಶ ಎಂ ಪೂಜಾರಿ,ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ ಗುಜ್ಜಾಡಿ,ಮುಖ್ಯೋಪಾಧ್ಯಾಯರಾದ ಗಂಗಾಧರ ಭಂಟ್,ಕುಸುಮ,ವಸAತ ಮೇಸ್ತ,ಸಂಘದ ಖಜಾಂಚಿ ಕೃಷ್ಣ ಗುಜ್ಜಾಡಿ,ಜೊತೆ ಕಾರ್ಯದರ್ಶಿ ರಾಘವೇಂದ್ರ ಡಿ,ರವಿ ಗುಜ್ಜಾಡಿ ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಶಿಕ್ಷಕಿ ಸುನೀತಾ ಸ್ವಾಗತಿಸಿದರು.ಶಿಕ್ಷಕಿ ಶಯನಾ ನಿರೂಪಿಸಿ,ವಂದಿಸಿದರು.