ವರ್ಧಂತಿ ಮಹೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ಜಾಲಾಡಿ ಶ್ರೀನಾಗ,ಜಟ್ಟಿಗ ಸಪರಿವಾರ ದೇವಸ್ಥಾನದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಶನಿವಾರ ನಡೆಯಿತು.
ಶ್ರೀದೇವರ ವಾರ್ಷಿಕ ವರ್ಧಂತಿ ಮಹೋತ್ಸವ ಅಂಗವಾಗಿ ಭಜನಾ ಕಾರ್ಯಕ್ರಮ,ನಾಗದರ್ಶನ ಸೇವೆ,ಅನ್ನಸಂತರ್ಪಣೆ ಹಾಗೂ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮ್ಮಾನ:ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳಾದ ಶ್ರಾವ್ಯ ಜಿ.ದೇವಾಡಿಗ,ದೀಕ್ಷಾ ದೇವಾಡಿಗ,ಸೃಜನಾ ದೇವಾಡಿಗ,ನಿಕಿತಾ ದೇವಾಡಿಗ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಮೀಕ್ಷಾ ಎಸ್.ಪೂಜಾರಿ,ರಕ್ಷಿತಾ ಆರ್.ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಂದಾಯ ಅಧೀಕ್ಷಕ ರಾಘವೇಂದ್ರ ದೇವಾಡಿಗ,ಹೊಸಕಳಿ ಶ್ರೀ ಬೊಬ್ಬರ್ಯ ದೈವಸ್ಥಾನದ ಪಾತ್ರಿ ಚಿಕ್ಕ ದೇವಾಡಿಗ,ಉದ್ಯಮಿ ಮಂಜುನಾಥ ಪೂಜಾರಿ ಭಟ್ರಬೆಟ್ಟು,ಲಕ್ಷ್ಮಣ ದೇವಾಡಿಗ,ಅಧ್ಯಕ್ಷ ಉದಯ ದೇವಾಡಿಗ ಉಪಸ್ಥಿತರಿದ್ದರು.ಶಿಕ್ಷಕ ಕಿರಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.