ನೀರಿನ ಬಳಕೆ,ಸಂರಕ್ಷಣೆಯ ಅರಿವು ಕಾರ್ಯಕ್ರಮ

ಬ್ರಹ್ಮಾವರ:ಸಕಲ ಜೀವಿ ಸಂಕುಲಗಳಿಗೆ ನೀರು ಅತಿ ಅವಶ್ಯವಾಗಿದೆ,ನೀರಿಲ್ಲದೆ ಇರಲಾಗದು ಬದುಕು ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಸಲುವಾಗಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ “ಪ್ರತಿ ಹನಿಯ ಎಣಿಕೆ “ಎನ್ನುವ ವಿಚಾರದ ಕುರಿತು ಕಾರ್ಯಕ್ರಮ ನಡೆಯಿತು.
ಡಾ. ವಿನೋದ್ ಎ ಆರ್ ಸಹಪ್ರಾಧ್ಯಾಪಕರು ಕೃಷಿ ಕೇಂದ್ರ ಬ್ರಹ್ಮಾವರ ಇವರು ವಿದ್ಯಾರ್ಥಿಗಳಿಗೆ ನೀರಿನ ಮಹತ್ವ,ನೀರಿನ ಮಿತ ಬಳಕೆ ,ಜೊತೆಗೆ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕುರಿತಾಗಿ ಜಾಗೃತಿ ಅರಿವು ಮೂಡಿಸಿದರು . ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ,ಹಾಗೂ ಕಾಲೇಜಿನ ನಿರ್ದೇಶಕಿಯಾದ ಮಮತಾ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್ ವಿದ್ಯಾರ್ಥಿಗಳಿಗೆ ಜಾಗೃತಿಯ ಕುರಿತು, ದಿನನಿತ್ಯದಲ್ಲಿ ನೀರಿನ ಬಳಕೆ ಸಂರಕ್ಷಿಸುವ ಕುರಿತಾಗಿ ಮಾತನಾಡಿದರು.ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಗೀತಾ ಮತ್ತು ಶ್ರೀಮತಿ ಶೈಲಾ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿ ಸಿದ್ಧಿಕಾ,ಪ್ರತೀಕ್ಷಾ ನಿರೂಪಿಸಿದರು,ಸುಹಾನಾ, ಸ್ವಾಗತಿಸಿದರು ,ನಂದಿನಿ ಅತಿಥಿಗಳನ್ನು ಪರಿಚಯಿಸಿ, ಮಿಥಿಲ್ ವಂದಿಸಿದರು.