ಕುಡಿಯುವ ನೀರಿಗಾಗಿ ಹರಸಾಹಸ


ಬೈಂದೂರು:ತೀವೃ ಸ್ವರೂಪದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಡವು ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಆಳದ ಬಾವಿ ಕಟ್ಟೆ ಮೇಲೆ ನಿಂತು ಹರ ಸಾಹಸಪಟ್ಟು ನೀರನ್ನು ಸೇದುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.ಮಹಿಳೆಯರ ಜೀವದ ಸುರಕ್ಷತೆ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆ ಮತ್ತು ಸ್ಥಳೀಯ ಗ್ರಾಪ ಪಂಚಾಯಿತಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.