ಕೆ.ಎಸ್ ಪ್ರಮೋದ್ ರಾವ್ ಜನ್ಮ ದಿನಾಚರಣೆ,ಶ್ರೀಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Share

Advertisement
Advertisement
Advertisement

ಕುಂದಾಪುರ:ನಂಚಾರು ಕಾಮಧೇನು ಗೋಶಾಲೆ ಮಹಾ ಪೋಷಕರು,ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು ಸಂಸ್ಥಾಪಕರಲ್ಲಿ ಒಬ್ಬರಾದ,ಆರ್.ಕೆ ಸಂಜೀವ ರಾವ್ ಸ್ಮಾರಕ ದತ್ತಿ ಹಾಗೂ ಕಂಬದಕೋಣೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಕೆ.ಎಸ್.ಪ್ರಮೋದ್ ರಾವ್ (ಪ್ರಮೋದ್ ಅಣ್ಣ) ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಅಭಿಮಾನಿ ಬಳಗದವರಿಂದ ಕಂಬದಕೋಣೆ ಶ್ರೀಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಹಾಗೂ ಬೈಂದೂರು ತಾಲೂಕಿನ ಕಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.

ಕಂಬದಕೋಣೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಭಟ್ ಅವರು ಮಾತನಾಡಿ,
ಆರ್.ಕೆ ಸಂಜೀವ ರಾವ್ ಅವರ ಸುಪುತ್ರರಾದ ಕೆ.ಎಸ್ ಪ್ರಮೋದ್ ರಾವ್ ಅವರ ಜನ್ಮದಿನಾಚರಣೆ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
ಸುಮಾರು 200 ವರ್ಷಕ್ಕೂ ಹೆಚ್ಚಿನ ಕಾಲದ ಇತಿಹಾಸವನ್ನು ಹೊಂದಿರುವ ಈ ದೇವಾಲಯವನ್ನು ಕೆ.ಎಸ್ ಪ್ರಮೋದ್ ರಾವ್ ಅವರು ಜೀರ್ಣೋದ್ಧಾರ ಮಾಡಿ ಸುಂದರವಾದ ಶಿಲಾಮಯ ದೇವಾಲಯವನ್ನು ನಿರ್ಮಿಸಿದ್ದಾರೆ, ಸಾಮಾಜಿಕ,ಧಾರ್ಮಿಕ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಶ್ರೀ ಪರಮಾತ್ಮನನ್ನು ಆರೋಗ್ಯ,ಸುಖ ಸಂಪತ್ತು ನೀಡಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಉದ್ಯಮಿಗಳಾದ ನಾಗರಾಜ ಶೆಟ್ಟಿ ನಾರ್ಕಳಿ ಗುಡಿಮನೆ ಅವರು ಮಾತನಾಡಿ,ಬಡವರ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಊರಿನ ಬಗ್ಗೆ ಅಭಿಮಾನವನ್ನು ಹೊಂದಿರುವ ಪ್ರಮೋದ್ ಅಣ್ಣನವರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ತಮ್ಮದೇ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಮಾಡುತ್ತಿರುವುದೇ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ತಂದೆಯ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ್ರಮೋದ್ ಅಣ್ಣನವರಿಗೆ ಆದಿ ಪರಾಶಕ್ತಿ ಮೂಕಾಂಬಿಕೆ ದೇವಿ ಹಾಗೂ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

ಶ್ರೀ ಬೊಬ್ಬರ್ಯ ಪ್ರೆಂಡ್ಸ್ ಕಂಬದಕೋಣೆ ಅಧ್ಯಕ್ಷರಾದ ಸುರೇಂದ್ರ ಪೂಜಾರಿ ಮಾತನಾಡಿ,ಪ್ರಮೋದ್ ಅಣ್ಣನವರ ಅಭಿಮಾನಿ ಬಳಗದವರಿಂದ ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಶ್ರೇಯೋಭಿವೃದ್ಧಿಗಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.ಅವರಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನೆರವೇರಲಿ ಎಂದರು.

ಕದಂಬ ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಪೂಜಾರಿ ಮಾತನಾಡಿ,ಆರ್.ಕೆ ಸಂಜೀವ ರಾವ್ ಅವರ ಗತಕಾಲದ ವೈಭವವನ್ನು ಮರುಕಳಿಸುವಲ್ಲಿ ಅವರ ಮಗನಾದ ಪ್ರಮೋದ್ ಅಣ್ಣನವರ ಸಾಮಾಜಿಕ ಕಾರ್ಯವೈಖರಿ ಬಗ್ಗೆ ವಿವರಿಸಿದರು.ಈ ಸಂದರ್ಭ ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ದೇವಾಡಿಗ, ರಾಘವೇಂದ್ರ ದೇವಾಡಿಗ, ಮಂಜುನಾಥ ಪೂಜಾರಿ ಹಾಡಿಮನೆ,ಪ್ರತೀಶ್ ಪೂಜಾರಿ, ಮೋಹನ್ ದೇವಾಡಿಗ, ಶ್ರೀನಿವಾಸ ಶೆಟ್ಟಿ,ಸಂತೋಷ್ ಪೂಜಾರಿ, ಅಜಿತ್ ಭಂಡಾರಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಕೆ.ಎಸ್ ಪ್ರಮೋದ್ ರಾವ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page