ತೊಂಬಟ್ಟು:ಕಾಡಿನಲ್ಲಿ ಕಣ್ಮರೆಯಾಗಿದ್ದ ಯುವಕ ಪತ್ತೆ,ಕುಟುಂಬಸ್ಥರಲ್ಲಿ ಸಂಭ್ರಮ

Share

Advertisement
Advertisement
Advertisement

ಕುಂದಾಪುರ:ತನ್ನ ಎರಡು ಸಾಕು ನಾಯಿಗಳ ಜತೆ ಕಾಡಿಗೆ ತೆರಳಿದ್ದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ನಾಯ್ಕ್ ಎನ್ನುವ ಯುವಕ ಸೆ.16 ರಂದು ಶನಿವಾರ ನಾಪತ್ತೆ ಆಗಿದ್ದರು.ಒಂದು ವಾರದ ಬಳಿಕ ತನ್ನ ಸಾಕು ನಾಯಿಯೊಂದಿಗೆ ಶನಿವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ ಎನ್ನುವ ಯುವಕ ತನ್ನ ಎರಡು ಸಾಕು ನಾಯಿಗಳೊಂದಿಗೆ ಕಳೆದ ಶನಿವಾರದಂದು ಕಾಡಿಗೆ ತೆರಳಿದ್ದರೂ.ಸಂಜೆ ಆಗುತ್ತಲೆ ಒಂದು ಸಾಕು ನಾಯಿ ಮನೆಗೆ ಮರಳಿದ್ದರೂ ವಿವೇಕನಂದ ಮಾತ್ರ ಮನೆಗೆ ವಾಪಾಸು ಬಾರಲೆ ಇಲ್ಲಾ ಅವರ ಜತೆಯಲ್ಲಿದ್ದ ಇನ್ನೊಂದು ಸಾಕು ನಾಯಿ ಕೂಡ ನಾಪತ್ತೆ ಆಗಿತ್ತು.ಕತ್ತಲಾದರೂ ಮಗ ಮರಳಿ ಮನೆಗೆ ಬಾರದಿರುವ ಸನ್ನಿವೇಶದಿಂದ ಆತಂಕಿತರಾದ ಮನೆಯವರು ಸ್ಥಳೀಯರ ಸಹಕಾರದಿಂದ ಮನೆ ಪಕ್ಕದಲ್ಲಿರುವ ಕಾಡಿಗೆ ಹೋಗಿ ಬೆಳಗಿನ ಜಾವಾದ ತನಕ ಹುಡುಕಾಟ ನಡೆಸಿ,ಕಾಡನ್ನು ಜಾಲಾಡಿದ್ದರು ವಿವೇಕಾನಂದ ಪತ್ತೆ ಆಗಲೆ ಇಲ್ಲಾ,ಹುಡುಕಾಟದ ಬಳಿಕ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು.
ಗ್ರಾಮಸ್ಥರು,ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ನಕ್ಷಲ್ ನಿಗ್ರಹ ಪಡೆ,ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ವಿವೇಕನಂದರ ಪತ್ತೆಗಾಗಿ ಕಳೆದ ಒಂದು ವಾರದಿಂದ ದಟ್ಟವಾದ ಕಾಡಿನಲ್ಲಿ ತೀವೃವಾದ ಹುಡುಕಾಟವನ್ನು ಮಾಡಿದ್ದರು ಅವರ ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.
ಸೆ.23 ರಂದು ಶನಿವಾರ ಕಬ್ಬಿನಾಲೆ ಮನೆಯೊಂದರ ಸಮೀಪ ತನ್ನ ಸಾಕು ನಾಯಿಯೊಂದಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಮಗ ಪತ್ತೆಯಾಗಿರುವುದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಾಡಿಗೆ ತೆರಳಿದ್ದ ವಿವೇಕನಂದ ಅವರಿಗೆ ದಿಕ್ಕು ತಪ್ಪಿದ್ದರಿಂದ ಮರಳಿ ಮನೆಗೆ ಬಾರದೆ ಎಂಟು ದಿನಗಳಿಂದ ಕಾಡಿನಲ್ಲೆ ಅಲೆದಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಕಳೆದ ಎಂಟು ದಿನಗಳಿಂದಲೂ ಸಾಕು ನಾಯಿ ಅವರ ಜತೆ ಇದ್ದು,ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಶೇಷವಾದ ಸಂಗತಿ.ಅನ್ನ ಆಹಾರವಿಲ್ಲದೆ ನಿತ್ರಣಗೊಂಡಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಟ್ಟ ಕಾಡಿನಲ್ಲಿ 8 ದಿನಗಳ ಕಾಲ ವನವಾಸ ಮಾಡಿದ ವಿವೇಕನಂದ ಅವರು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿರುವುದು ಸಂತಸದ ಸಂಗತಿ.

Advertisement


Share

Leave a comment

Your email address will not be published. Required fields are marked *

You cannot copy content of this page