ವಿದ್ಯುತ್ ತಂತಿ ಮೇಲೆ ಉರುಳಿದ ಮರದ ಗೆಲ್ಲು

ಕುಂದಾಪುರ:ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ಬಡಾಕೆರೆ ಮುಖ್ಯ ರಸ್ತೆ ಬಳಿಯಲ್ಲಿರುವ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಲೈನ್ ತುಂಡಾಗಿದೆ.ಮೈನ್ ಲೈನ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಗ್ರಾಮ ಜನರಿಗೆ ವಿದ್ಯುತ್ ಕೈ ಕೊಟ್ಟಿದೆ.ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ಮೂಲಕ ಮರದ ಗೆಲ್ಲುಗಳನ್ನು ಸ್ಥಳಾಂತರಿಸಿ,ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು