ಕಿರಿಮಂಜೇಶ್ವರ:ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮ

Share

Advertisement
Advertisement
Advertisement

ಕುಂದಾಪುರ:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕಿರಿಮಂಜೇಶ್ವರ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿ ಮಾತನಾಡಿ,ಮಕ್ಕಳ ಒಳಗೆ ಅಡಗಿರುವ ಪ್ರತಿಭೆಯನ್ನು ಹೊರ ತರುವಲ್ಲಿ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯೋಗಕಾರಿ ಆಗಿದೆ.ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಮಗುವಿನ ಬೌದ್ಧಿಕ ಶಕ್ತಿ ವೃದ್ಧಿ ಆಗುವುದು ಮಾತ್ರವಲ್ಲದೆ ಮಾನಸಿಕವಾಗಿಯೂ ದೈಹಿಕವಾಗಿಯೂ ಬಲಿಷ್ಠವಾಗಲು ಸಹಕಾರಿ ಆಗುತ್ತದೆ ಎಂದು ಹೇಳಿದರು.ಸಮೃದ್ದ ಬೈಂದೂರು ಪರಿಕಲ್ಪನೆ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳ ಬಲವರ್ಧನೆಗೆ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಕಿರಿಮಂಜೇಶ್ವರ ಶಾಲೆಯ ಮುಖ್ಯೋಪಾಧ್ಯಾಯರಾದ ಶೇಖರ್ ಪೂಜಾರಿ ಅವರು ಸ್ವಾಗತಿಸಿ ಮಾತನಾಡಿ,ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪುರ ಮೆರವಣಿಯೊಂದಿಗೆ ಪ್ರಾರಂಭವಾಗಿ 40 ವಿಭಾಗದಲ್ಲಿ ಸ್ಪರ್ಧೆ ನಡೆದಿದೆ.ಇವೊಂದು ಸ್ಪರ್ಧೆಯಲ್ಲಿ ಜಿಲ್ಲೆಯ ನಾನಾ ಶಾಲೆಗಳಿಂದ 250 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಯಶಸ್ವಿಯಾಗಿ ನಡೆದ ಇವೊಂದು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ ಮಾತನಾಡಿ,ಶಿಕ್ಷಣ ಇಲಾಖೆ ಮತ್ತು ಹಳೆ ವಿದ್ಯಾರ್ಥಿ ಸಂಘ,ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರ ಕೂಡುವಿಕೆಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ ಎಂದು ಹೇಳಿದರು,ನಮ್ಮ ಊರಿನಲ್ಲಿ ಇವೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಅಗಸ್ತ್ಯೇಶ್ವರ ದೇವಸ್ಥಾನದ ಕಿರಿಮಂಜೇಶ್ವರ ಆಡಳಿತ ಮೊಕ್ತೇಸರರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಐತಾಳ್ ಮಾತನಾಡಿ,ನಮ್ಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ 2000ಕ್ಕೂ ಅಧಿಕ ಜನ ಭಾಗವಹಿಸಿ ಸಾಕ್ಷಿಭೂತರಾಗಿದ್ದಾರೆ ಎಂದರು.ಮುಂದಿನ ದಿನಗಳಲ್ಲಿಯೂ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದು ಕೇಳಿಕೊಂಡರು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಆಧುನಿಕ ಯುಗದಲ್ಲಿ ಮಕ್ಕಳನ್ನು ಕೂಡಿ ಹಾಕಿ ಶಿಕ್ಷಣವನ್ನು ನೀಡಲಾಗುತ್ತಿದೆ ಈ ರೀತಿ ಶಿಕ್ಷಣ ನೀಡುವುದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದನ್ನು ನಾವು ನೋಡ ಬಹುದಾಗಿದೆ ಎಂದರು.
ಪ್ರತಿಭಾ ಕಾರಂಜಿ ಅಂತಹ ಸ್ಪರ್ಧೆಗಳು ಆಯೋಜನೆ ಮಾಡುವುದರಿಂದ ಮಕ್ಕಳ ಒಳಗೆ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.

ಸುಮುಖ ಸುರೇಶ್ ಶೆಟ್ಟಿ ಉಪ್ಪುಂದ,ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜೇಶ್ ಕಾರಂತ್,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮೂಕಾಂಬಿಕಾ ಟಿಂಬರ್ ಕಿರಿಮಂಜೇಶ್ವರ ಕೆ.ಉಮೇಶ್ ಶ್ಯಾನುಭೋಗ,ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಆಡಳಿತ ಮೊಕ್ತೇಸರರಾದ ಎನ್.ವಿ ಪ್ರಕಾಶ್ ಐತಾಳ್, ಉದ್ಯಮಿಗಳಾಜ ಗಣೇಶ ಪೂಜಾರಿ,ಸತೀಶ ಪೂಜಾರಿ, ಹರಿಕೃಷ್ಣ ನಾಯರಿ, ಕೃಷ್ಣ ಪೂಜಾರಿ,ನೋಡಲ್ ಅಧಿಕಾರಿ ರೂಪ ರೇಖಾ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಲಯಾಧ್ಯಕ್ಷ ಸದಾನಂದ ಶೆಟ್ಟಿ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ತೆಕ್ಕಟ್ಟೆ, ಗಣಪತಿ ಹೋಬಳಿದಾರ್,ಅಚ್ಚುತ ಬಿಲ್ಲವ, ಗಣೇಶ ಪೂಜಾರಿ, ಬೈಂದೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಧಿಕಾರಿ ಚಂದ್ರಶೇಖರ ಶೆಟ್ಟಿ, ಗಿರೀಶ್ ಶ್ಯಾನುಭೋಗ್, ಬೈಂದೂರು ಪಿಎಸ್ಐ ತಿಮ್ಮೇಶ,ಉಪ ನಿರ್ದೇಶಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಗೋವಿಂದ ಮಡಿವಾಳ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮ ಆಚಾರ್ಯ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ನಾಯರಿ ಉಪಸ್ಥಿತರಿದ್ದರು.

ಡಿಡಿಪಿಐ ಗಣಪತಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಿರಿ ಮಂಜೇಶ್ವರ ಶಾಲೆಯ ಮುಖ್ಯೋಪಾಧ್ಯಾಯರಾದ ಶೇಖರ ಪೂಜಾರಿ ಸ್ವಾಗತಿಸಿದರು.ಶಿಕ್ಷಕರಾದ ಸುಬ್ರಹ್ಮಣ್ಯ.ಜಿ.ರಾಘವೇಂದ್ರ ಡಿ ನಿರೂಪಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ ನಾಯ್ಕ್ ವಂದಿಸಿದರು.

ಕಿರಿ ಮಂಜೇಶ್ವರ ಶಾಲೆಯ ಶಿಕ್ಷಕರಾದ ಮಹಾಲಕ್ಷ್ಮಿ, ಹನುಮಂತ ಗೌಡ,ವೀಣಾ,ರೂಪ, ಗೀತಾ, ಗಣೇಶ, ಕಲ್ಯಾಣಿ, ಲತಾ
ಸಹಕರಿಸಿದರು.

ಉಡುಪಿ ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 250 ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.40 ವಿಭಾಗದಲ್ಲಿ ನಾನಾ ಸ್ಪರ್ಧೆಗಳು ನಡೆಯಿತು.
ನಾಗೂರು ಬಸ್ ಸ್ಟ್ಯಾಂಡ್ ನಿಂದ ಕಿರಿ ಮಂಜೇಶ್ವರ ಶಾಲೆಯ ತನಕ ಆಕರ್ಷಕ ಮೆರವಣಿಗೆ ಸಾಗಿತು.ಕಂಬಳದ ಕೋಣ,ಎತ್ತಿನ ಗಾಡಿ, ಯಕ್ಷಗಾನ,ಟ್ಯಾಬ್ಲೋ,ಚೆಂಡ,ವಾದ್ಯ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.

Advertisement


Share

Leave a comment

Your email address will not be published. Required fields are marked *

You cannot copy content of this page