ಸರಣಿ ಅಪಘಾತ,ವಾಹನ,ಅಂಗಡಿಗಳಿಗೆ ಗುದ್ದಿದ ಮಣ್ಣು ಸಾಗಾಟದ ಲಾರಿ

ಮಂಗಳೂರು:ಕೆಂಪು ಮಣ್ಣು ಸಾಗಾಟದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ವೇಗದಿಂದ ಬರುತ್ತಿದ್ದ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಎಡಪದವು ಜಂಕ್ಷನ್ ಬಳಿ ಮೂಡುಬಿದಿರೆ ಕಡೆಯಿಂದ ಆಗಮಿಸಿದೆ. ಖಾಸಗಿ ಬಸ್ಸು ಹಾಗೂ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ದಂತ ಚಿಕಿತ್ಸಾಲಯ ಸಹಿತ ಹಲವು ಅಂಗಡಿ ಕಟ್ಟಡಗಳಿಗೆ ಗುದ್ದಿ ಭಾರೀ ಹಾನಿ ಸಂಭವಿಸಿದೆ.ಈ ನಡುವೆ ಅಂಗಡಿ-ಮುಂಗಟ್ಟುಗಳ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳು ಸೇರಿದಂತೆ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಹಲವು ದ್ವಿಚಕ್ರ ವಾಹನಗಳು ನುಜ್ಜು ಗುಜ್ಜಾಗಿವೆ.ಕಾರು ಕೂಡಾ ಜಖಮ್ ಗೊಂಡಿದ್ದು ಕಾರಿನಲ್ಲಿದ್ದವರಿಗೆ ಗಾಯಗಳಾಗಿವೆ.
ಅಪಘಾತದ ತೀವ್ರತೆಗೆ ಲಾರಿ , ಬಸ್ಸು ,ಟ್ಯಾಂಕರ್ ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿವೆ.ಸರಣಿ ಅಪಘಾತ ನಡೆಸಿದ ಲಾರಿ ಅಂತಿಮವಾಗಿ ಪಲ್ಟಿಯಾಗಿದ್ದು ಲಾರಿಯ ಬ್ರೇಕ್ ಫೇಲ್ ಆಗಿರುವುದೇ ಕಾಲಣ ಎನ್ನಲಾಗಿದೆ.
ಮೂರು ಅಂಗಡಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅದೃಷ್ಟವಶಾತ್ ಅಪಘಾತದಲ್ಲಿ ಸಾವು ನೋವು ಸಂಭವಿಸಿಲ್ಲ.