ಕೊಡೇರಿ ಗಂಗೆಬೈಲು ಬೀಚ್ ಅಭಿವೃದ್ಧಿಗೆ ಆಗ್ರಹ:ಪ್ರವಾಸಿ ತಾಣಕ್ಕೆ ಹೇಳಿ ಮಾಡಿಸಿದ ಜಾಗ

Share

Advertisement
Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ಬೀಚ್ ಗಳಲ್ಲಿ ಕೊಡೇರಿ ಗಂಗೆಬೈಲು ಬೀಚ್ ಅದ್ಭುತಗಳಲ್ಲಿ ಒಂದಾಗಿದೆ.ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು ಅಲ್ಲಿನ ಸಿವಾಕ್,ಸಮುದ್ರ ಮತ್ತು ಎಡಮಾವಿನ ಹೊಳೆ ನದಿ ಸಂಗಮ,ಸೂರ್ಯಾಸ್ತ ನೋಡುಗರ ಕಣ್ಣಿಗೆ ಹಬ್ಬ ನೀಡುವಂತಿದೆ.ಕೊಡೇರಿ ಬೀಚ್ ನಲ್ಲಿ ಮೂಲ ಸೌಕರ್ಯದ ಕೊರತೆಗಳು ಕಾಡುತ್ತಿದ್ದು, ಪ್ರವಾಸಿಗರ ಹಿತ ದೃಷ್ಟಿಯಿಂದ ಬೀಚ್ ಅನ್ನು ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಡೇರಿ ಗಂಗೆಬೈಲು ಬೀಚ್
ಬೈಂದೂರು ಪಟ್ಟಣದಿಂದ ಸರಿ ಸುಮಾರು 10 ಕಿ.ಮೀ ದೂರದಲ್ಲಿದೆ.ಪ್ರಕೃತಿಯ ರಮಣೀಯ ಸುಂದರ ನೈಸರ್ಗಿಕ ತಾಣವನ್ನು ಅಭಿವೃದ್ಧಿ ಪಡಿಸಿದರೆ,ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೀಚ್ ನತ್ತಾ ಆಗಮಿಸಲಿದ್ದು,ಸ್ಥಳೀಯವಾಗಿ ವ್ಯಾಪಾರ ವಹಿವಾಟು ಕೂಡ ವೃದ್ಧಿ ಆಗಲಿದೆ.

ಸ್ಥಳೀಯರಾದ ಗಣೇಶ್ ಖಾರ್ವಿ ಅವರು ಮಾತನಾಡಿ,
ಸುಮಾರು ಆರು ವರ್ಷದ ಹಿಂದೆ ಸಿವಾಕ್ ಮೊದಲನೆಯ ಹಂತ ಕಾಮಗಾರಿ ಯೋಜನೆಯಡಿ 200 ಮೀಟರ್ ವರೆಗೆ ಸಂಪೂರ್ಣವಾಗಿ ಮುಗಿದಿದ್ದು ಹಾಗೂ ಇನ್ನೂ 200 ಮೀಟರ್ ಬಾಕಿ ಹಂತ ದಲ್ಲಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಮನೋಹರ ಖಾರ್ವಿ ಮಾತನಾಡಿ,
ಇವೊಂದು ಪ್ರವಾಸಿ ತಾಣಕ್ಕೆ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಇನ್ನೂ ಕೂಡ ಕಾಲ ಕೂಡಿ ಬಂದಿಲ್ಲ.ಹೊಂಡಗುಂಡಿ ಗಳಿಂದ ಕೂಡಿದ ರಸ್ತೆಯಲ್ಲಿ ಸಾಗುವುದೇ ದುಸ್ತರವಾಗಿದೆ,
ಶೌಚಾಲಯ ವ್ಯವಸ್ಥೆ ಸಹಿತ ದಾರಿ ದೀಪದ ವ್ಯವಸ್ಥೆ ಇಲ್ಲ ,ಆಸನದ ವ್ಯವಸ್ಥೆ ಕೂಡ ಇಲ್ಲ ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರಿ ರಾಮ ಭಜನಾ ಮಂದಿರ ಅಧ್ಯಕ್ಷ ಕೇಶವ ಖಾರ್ವಿ ಹಾಗೂ ಮೀನುಗಾರ ಮುಖಂಡರು ಮತ್ತು ಸ್ಥಳೀಯರು,ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page