ಜನರ ಭಾವನೆಗಳಿಗೆ ಹಿಂದುತ್ವಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ- ಕೆ.ಎಸ್ ಈಶ್ವರಪ್ಪ

Share

Advertisement
Advertisement
Advertisement

ಬೈಂದೂರು:ರಾಷ್ಟ್ರಭಕ್ತ ಬಳಗ ಬೈಂದೂರು ವತಿಯಿಂದ ಬ್ರಹತ್ ವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರದಲ್ಲಿ ಬುಧವಾರ ನಡೆಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿ,2030 ಬೂತ್ ಗಳಲ್ಲಿ ಬೂತ್ ಏಜೆಂಟ್ ರನ್ನು ಈಗಾಗಲೇ ನೇಮಕ ಮಾಡಲಾಗಿದೆ.ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕೆಲಸವನ್ನು ಮಾಡುತ್ತಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ.ಅವರಿಗೆ ಹಿಂದುತ್ವದ ಬಗ್ಗೆ ಕಾಳಜಿ ಮತ್ತು ಆಸಕ್ತಿ ಇಲ್ಲ.ಜನರ ಭಾವನೆಗಳಿಗೆ ಮತ್ತು ಹಿಂದುತ್ವಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಸಮಾಜ ಜಾಗೃತ ಗೊಳ್ಳುವುದು ಇಷ್ಟವಿಲ್ಲ.ಬಿಜೆಪಿ ಕೂಡ ಇಂತಹ ಮನಸ್ಥಿತಿಯನ್ನು ಹೊಂದಿದೆ ಎಂದು ದೂರಿದರು.ಜಿಹಾದಿ ಮನಸ್ಥಿಯಿಂದಲೆ ಹುಬ್ಬಳ್ಳಿಯಲ್ಲಿ ನೇಹಾಳ ಹತ್ಯೆಯಾಗಿದೆ.ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಭಯ ಉಂಟಾಗುತ್ತಿದೆ.ರಾಷ್ಟ್ರೀಯ ವಿಚಾರ,ರೈತರ ಪರವಾಗಿ ಚರ್ಚೆ ಮಾಡುತ್ತಿದ್ದ ಕಾಲದಲ್ಲಿ ಇಂದು ರಾಜ್ಯ ಬಿಜೆಪಿಯಲ್ಲಿ ಕುಟುಂಬ ಮತ್ತು ಜಾತಿ ರಾಜಕಾರಣ ಚರ್ಚೆ ನಡೆಯುತ್ತಿದೆ.ಜಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ನಡೆಯುತ್ತಿದೆ ಎಂದು ದೂರಿದರು.ಹಿಂದುತ್ವ ಉಳಿವಿಗಾಗಿ ಸಾಕಷ್ಟು ಹೋರಾಟಗಾರರು, ಅನೇಕ ಮೀನುಗಾರರು ನಮ್ಮ ಜೊತೆ ಇದ್ದಾರೆ ಎಂದಿಗೂ ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.ಚುನಾವಣೆ ಬಳಿಕ ಬೈಂದೂರು ಕ್ಷೇತ್ರದ ಜನರ ಜೊತೆ ಕುಳಿತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಧ್ವನಯಾಗುತ್ತೇನೆ ಎಂದು ಜನರಿಗೆ ವಿಶ್ವಾಸವನ್ನು ತುಂಬಿದರು.ಕ್ರಮ ಸಂಖ್ಯೆ 08 ಕಬ್ಬಿನ ಗುರುತಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ಹಿಂದೂ ಮುಖಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಸಮಾಜದ ಧ್ವನಿಯಾಗಿ ಈಶ್ವರಪ್ಪ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.ಸಚಿವರಾಗಿದ್ದ ಸಮಯದಲ್ಲಿ ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಬ್ಬಿನ ಗುರುತಿಗೆ ಮತ ನೀಡಬೇಕೆಂದು ಕೇಳಿಕೊಂಡರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಮೇಯರ್ ಸೀತಾಲಕ್ಷ್ಮಿ ಮಾತನಾಡಿದರು.ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಾದ ನಾಗರಾಜ ಖಾರ್ವಿ,ಸುರೇಶ ಪೂಜಾರಿ,ಶೈಲಜಾ,ಕೋಮಲ,ಮಂಗಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆರತಿ,ಸುವರ್ಣ ಶಂಕರ್, ಮೋಹನ ಖಾರ್ವಿ ಉಪ್ಪುಂದ,ವಿನೋದರಾಜ್ ಖಾರ್ವಿ,ಜಗದೀಶ ಖಾರ್ವಿ ಉಪಸ್ಥಿತರಿದ್ದರು.ಉಮೇಶ ಬಿಜೂರು ಸ್ವಾಗತಿಸಿದರು.ಮಹೇಶ್ ಶೇಟ್ ವಂದಿಸಿದರು.ಈಶ್ವರಪ್ಪ ಅವರನ್ನು ಮೀನುಗಾರರ ಮುಖಂಡರು ಸನ್ಮಾನಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page