ಚುನಾವಣೆ ಬಹಿಷ್ಕಾರದ ಎಚ್ಚರಿಕೆ,ಬ್ಯಾನರ್ ಅಳವಡಿಕೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕೇರಿಕೊಡ್ಲು ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಹಾಕದಿರಲು ನಿರ್ಧರಿಸಿ ಚುನಾವಣ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡುವುದರ ಮುಖೇನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರ
ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದ ಕೇರಿಕೊಡ್ಲು ಭಾಗದ ನಿವಾಸಿಗಳಿಗೆ ಸುಸಜ್ಜಿತವಾದ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಹೊಂದುವುದು ಕನಸಿನ ಮಾತೆ ಎಂದು ಭಾಸವಾಗುತ್ತಿದೆ.ಕಳೆದ ಮುವತ್ತು ವರ್ಷಗಳಿಂದ ಸ್ಥಳೀಯರು ಸಲ್ಲಿಕೆ ಮಾಡುತ್ತಿರುವ ಅಹವಾಲಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಂದು ಬಾರಿಯೂ ಸ್ಪಂದನೆ ಮಾಡಿಲ್ಲ.ಮಳೆಗಾಲದಲ್ಲಿ ಕೇಸರಿನ ರಾಡಿಯಿಂದ ಕೂಡಿರುವ ರಸ್ತೆಯಲ್ಲಿ ಸಾಗುವುದೆ ಅಲ್ಲಿನ ಜನರಿಗೆ ದುಸ್ತರವಾಗಿದೆ.ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಕೇರಿಕೊಡ್ಲು ರಸ್ತೆಯನ್ನು ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು,ಅಧಿಕಾರಿಗಳು ಮುಂದಾಗದೆ ಇದ್ದರೆ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಕೆಂಪು ಧೂಳಿನಿಂದ ಕೂಡಿದ್ದರೆ/ಮಳೆಗಾಲದಲ್ಲಿ ಕೇಸರು ರಾಡಿಯಿಂದ ಕೂಡಿರುತ್ತದೆ.

ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಅಳವಡಿಕೆ:ಕೇರಿಕೊಡ್ಲು ಪರಿಸರದಲ್ಲಿ 20ಕ್ಕೂ ಅಧಿಕ ಮನೆಗಳಿವೆ, ಅಂದಾಜು 120ಕ್ಕೂ ಅಧಿಕ ಮತಗಳಿವೆ.ಊರಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಬೇಸತ್ತ ಅಲ್ಲಿನ ನಾಗರಿಕರು ಚುನಾವಣೆಯನ್ನೆ ಬಹಿಷ್ಕರಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ.ಅದರ ಭಾಗವಾಗಿ ಬ್ಯಾನರ್ ಅಳವಡಿಕೆಯನ್ನು ಕೂಡ ಮಾಡಿದ್ದಾರೆ.
ಮಣ್ಣಿನ ರಸ್ತೆಯಲ್ಲಿ ಸಂಕಟದ ಸಂಚಾರ:ಮೊವಾಡಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕೇರಿಕೊಡ್ಲು ಭಾಗದ ಮಣ್ಣಿನ ರಸ್ತೆ ಸುಮಾರು 1.30 ಕಿ.ಮೀ ದೂರವನ್ನು ಹೊಂದಿದೆ ಆ ಭಾಗದ ನಿವಾಸಿಗಳಿಗೆ ಇದೆ ಪ್ರಮುಖ ರಸ್ತೆ ಆಗಿದ್ದು ಒಂದು ಬಾರಿಯೂ ಅಭಿವೃದ್ಧಿ ಆಗಿಲ್ಲ.ಮಣ್ಣಿನಿಂದ ಕೂಡಿದ ಕೇರಿಕೊಡ್ಲು ರಸ್ತೆ ಬೇಸಿಗೆಯಲ್ಲಿ ಕೆಂಪು ಧೂಳಿನಿಂದ ಕೂಡಿದ್ದರೆ,ಮಳೆಗಾಲದಲ್ಲಿ ಕೇಸರು ರಾಡಿಯಿಂದ ಕೂಡಿರುತ್ತದೆ.ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕ್ಕೆನ್ನುವುದು ಗ್ರಾಮಸ್ಥರ ಆಗಹ್ರವಾಗಿದೆ.
ಹೊಸಾಡು ಗ್ರಾಮ ಒಂದರಲ್ಲೇ ಇದು ಎರಡನೇ ಪ್ರರಕರಣ:ಕಳೆದ ಒಂದು ವಾರದ ಒಳಗೆ ಹೊಸಾಡು ಗ್ರಾಮ ಪಂಚಾಯತ್ ಒಂದರಲ್ಲೆ ಚುನಾವಣೆ ಬಹಿಷ್ಕರಿಸುವ ಬ್ಯಾನರ್ ಅಳವಡಿಕೆ ಮಾಡಿರುವುದು ಇದು ಎರಡನೇ ಪ್ರಕರಣವಾಗಿದೆ.ಜ.21 ರ ಭಾನುವಾರ ದಂದು ಹೊಸಾಡು ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿ ನಿವಾಸಿಗಳು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page