ಕಟ್ಟಡ ಸಾಮಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರ

ಕುಂದಾಪುರ:3ಎ ಲೈಸನ್ಸ್ ರದ್ದು ಪಡಿಸಿರುವುದನ್ನು ವಿರೋಧಿಸಿ ಹಾಗೂ ಕಟ್ಟಡ ಸಾಮಗ್ರಿ ಸಾಗಾಟ ಮಾಡುವ ವಾಹನಗಳ ಮೇಲೆ ಅನಗತ್ಯ ಕೇಸ್ ದಾಖಲು ಮಾಡುತ್ತಿರುವುದನ್ನು ಖಂಡಿಸಿ ಕುಂದಾಪುರ ಮತ್ತು ಬೈಂದೂರು ವಲಯ ಲಾರಿ ಮತ್ತು ಟೆಂಪೆÇೀ ಮಾಲಕರು ಹಾಗೂ ಚಾಲಕರ ಸಂಘದ ವತಿಯಿಂದ ಕಟ್ಟಡ ಸಾಮಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಹೆಮ್ಮಾಡಿಯಲ್ಲಿ ನಡೆಯಿತು.
ಮುಷ್ಕರದ ಅಂಗವಾಗಿ ಹೆಮ್ಮಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಬದಿಯಲ್ಲಿ ನೂರಾರು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಲಾಯಿತು.ಸಂಘದ ಮಾಲೀಕರು ಮತ್ತು ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.