ಅಣಬೆ ಕೃಷಿಯಲ್ಲಿ ಯಶಸ್ವಿ ಸಾಧನೆ


ಕುಂದಾಪುರ:ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವನ್ನು ಹೊಂದಿರುವ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಕುದ್ರುಕೋಡು ನಿವಾಸಿ ಲಂಬೋದರ ಶೆಟ್ಟಿ ಮತ್ತು ರಾಘು ಪೂಜಾರಿ ಅವರು ಅಣಬೆ ಕೃಷಿಯಲ್ಲಿ ಸ್ಫೂರ್ತಿದಾಯಕವಾಗಿ ಹೆಜ್ಜೆಯನ್ನು ಇಡುವುದರ ಮುಖೇನ ಯಶಸ್ವಿಯಾಗಿದ್ದಾರೆ.
ಉದ್ಯೋಗಕ್ಕಾಗಿ ದೂರ ದೂರದ ಊರಿಗೆ ತೆರಳದೆ ತಮ್ಮ ಊರಿನಲ್ಲಿ ಇದ್ದು ಕೊಂಡು ಏನಾದರೂ ಸಾಧಿಸಬೇಕು ಎನ್ನುವ ಹಂಬಲವನ್ನು ಹೊಂದಿರುವ ಯುವಕರಿಬ್ಬರು ವಿನೂತನ ಮಾದರಿಯಲ್ಲಿ “ಆರ್ಯ ಮಶ್ರೂಮ್ ಪ್ಲಾಂಟ್” ಅನ್ನು ಮಾಡಿದ್ದಾರೆ,ಇವರ ಫಾರ್ಮ್‍ನಲ್ಲಿ ಉತ್ಕøಷ್ಟ ಗುಣಮಟ್ಟದ ಅಣಬೆಗಳು ದೊರೆಯುತ್ತದೆ.ರಿಯಾತಿ ದರದಲ್ಲಿ ಮಾರಾಟವನ್ನು ಮಾಡಲಾಗುತ್ತಿದ್ದು ಅಣಬೆ ಪ್ರೀಯರು ಇವರ ಫಾರ್ಮ್ ಹೌಸ್‍ಗೆ ಹೋಗಿ ನೆರವಾಗಿ ಖರೀದಿಸಬಹುದು.ಉಪ್ಪಿನ ಕಾಯಿ,ಅಣಬೆ ಪೌಢರ್ ಸಹಿತ ನಾನಾ ರೀತಿಯ ಖಾದ್ಯಗಳಲ್ಲಿ ಬಳಕೆ ಮಾಡುತ್ತಾರೆ.ಔಷಧೀಯ ಗುಣಗಳನ್ನು ಹೊಂದಿರುವ ಅಣಬೆ ಪೌಷ್ಟಿಕಯುಕ್ತ ಆಹಾರ ಕೂಡ ಹೌದು.ಸುಮಾರು ಐದು ಸಾವಿರ ಯೂನಿಟ್ ಅಣಬೆ ಇವರ ಫಾರ್ಮ್ ಹೌಸ್‍ನಲ್ಲಿ ಬೆಳೆಯುತ್ತಿದೆ.
ಆರ್ಯ ಮಶ್ರೂಮ್ ಪ್ಲಾಂಟ್ ಕೃಷಿಕರಾದ ಲಂಬೋದರ ಶೆಟ್ಟಿ ಅವರು ಮಾತನಾಡಿ,ಬಹಳಷ್ಟು ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಅಣಬೆ ಕೃಷಿಯನ್ನು ಮಾಡಲಾಗಿದ್ದು,ಕೃಷಿ ಜೊತೆಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿಯಾಗಿದೆ.ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಆರ್ಯ ಮಶ್ರೂಮ್ ಪ್ಲಾಂಟ್‍ನ ಇನ್ನೊರ್ವ ಕೃಷಿಕರಾದ ರಾಘವ ಪೂಜಾರಿ ಮಾತನಾಡಿ,ಉದ್ಯೋಗದ ದೃಷ್ಟಿಯಿಂದ ಮತ್ತು ಕೃಷಿ ಮೇಲಿನ ಆಸಕ್ತಿಯಿಂದಾಗಿ ವಿನೂತನ ಮಾದರಿಯಲ್ಲಿ ಅಣಬೆ ಕೃಷಿಯನ್ನು ಮಾಡಲಾಗಿದೆ.ತಾವೆಲ್ಲರೂ ನಮಗೆ ಬೆಂಬಲವನ್ನು ನೀಡಬೇಕೆಂದರು.
ನಾಗೇಂದ್ರ ದೇವಾಡಿಗ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ವಿನೂತನ ಮಾದರಿಯಲ್ಲಿ ಅಣಬೆ ಕೃಷಿಯನ್ನು ಮಾಡಲಾಗಿದ್ದು.ಉತ್ತಮ ರೀತಿಯಲ್ಲಿ ನಿರ್ವಹಣೆಯನ್ನು ಕೂಡ ಮಾಡಲಾಗುತ್ತಿದೆ.ಅಣಬೆಗೆ ಜಾಗತಿಕವಾಗಿ ಮಣ್ಣನೆ ಇರುವುದರಿಂದ ಮಾರುಕಟ್ಟೆಯಲ್ಲಿ ಕೂಡ ಒಳ್ಳೆ ಬೇಡಿಕೆ ಇದೆ ಎಂದರು.