ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ,ಪ್ರತಿಭಟನೆ ಕೈಬಿಟ್ಟ ಪೋಷಕರು
ಕುಂದಾಪುರ:ಕನ್ನಡ ಶಿಕ್ಷಕರನ್ನು ಹೆಚ್ಚುವರಿ ಆಧಾರದ ಮೇಲೆ ವರ್ಗಾವಣೆ ಮಾಡಿರುವುದದನ್ನು ಖಂಡಿಸಿ ಕಳೆದ ಐದು ದಿನಗಳಿಂದ ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಪೋಷಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಡುಕೋಣೆ ಶಾಲೆಯಲ್ಲಿ ಬುಧುವಾರ ವಿಶೇಷ ಸಭೆ ನಡೆಯಿತು.
ಡಿಡಿಪಿಐ ಗಣಪತಿ.ಕೆ ಪೋಷಕರ ಸಭೆಯನ್ನುದ್ದೇಶಿಸಿ ಮಾತನಾಡಿ ಸರಕಾರದ ನಿಯಮದ ಪ್ರಕಾರ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ,
ಪರ್ಯಾಯವಾಗಿ ಅತಿಥಿ ಶಿಕ್ಷಕರೊಬ್ಬರನ್ನು ನೇಮಕ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.ಪೋಷಕರ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಒ ಮಂಜುನಾಥ್,ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಜ್ಯೋತಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್,ಉಪಾಧ್ಯಕ್ಷ ವಿಶ್ವನಾಥ್ ಪಡುಕೋಣೆ,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ,ರಾಜೀವ ಪಡುಕೋಣೆ,ಸ್ಥಳೀಯರಾದ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕರ ನೇಮಕಾತಿ ಬೇಡಿಕೆಗೆ ಶಿಕ್ಷಣ ಇಲಾಖೆ ಸ್ಪಂದಿಸಿದ ಕಾರಣ ಕಳೆದ ಐದು ದಿನಗಳಿಂದ ಪಡುಕೋಣೆ ಶಾಲೆಯಲ್ಲಿ ನಡೆಯುತ್ತಿದ್ದ ಪೋಷಕರ ಪ್ರತಿಭಟನೆ ಬುಧವಾರ ಮುಕ್ತಾಯಗೊಂಡಿದೆ.ಮಕ್ಕಳು ತರಗತಿಗೆ ಹಾಜರಾಗಿ ಪಾಠ ಪ್ರವಚನಗಳಲ್ಲಿ ತೊಡಗಿಕೊಂಡರು.



















































































































































































































































































































































































































































































































































































































































































































































































































































































































































































































































































































































































































































































































































































































































































