ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸಾಮಾನ್ಯ ಸಭೆ
ಕುಂದಾಪುರ:ಇಂದಿನ ಜೀವನ ಶೈಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಎದುರಾಗುತ್ತಿರುವ ಹಲವಾರು ಸವಾಲುಗಳ ನಡುವೆ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವುದರಿಂದ ಅವರ ಜೀವನ ಮಟ್ಟ ಸುಧಾರಣೆ ಜತೆಗೆ ಕುಟುಂಬ ನಿರ್ವಹಣೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ವಿಸ್ತಾರಣಾಧಿಕಾರಿ ವಾಸುದೇವ ಪುರಾಣಿಕ್ ಹೇಳಿದರು.
ಹೊಸಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಹೊಸಾಡು ಅದರ 2022-2023 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಸಂಘದ ಅಧ್ಯಕ್ಷೆ ಭವಾನಿ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷೆ ಕುಸುಮಾವತಿ,ನಿರ್ದೇಶಕರುಗಳಾದ ಜ್ಯೋತಿ ಶೆಟ್ಟಿ,ವನಜ ಸಿ,ಸುಮತಿ,ಗಿರಿಜಾ ಎಂ.ಪಿ,ಚಂದ್ರಾವತಿ,ನೇತ್ರಾವತಿ ಎಸ್,ಬೇಬಿ,ಜಯಪದ್ಮ ಉಪಸ್ಥಿತರಿದ್ದರು.ನಿರ್ದೇಶಕಿ ಮಲ್ಲಿಕಾ ಸಿ ಶೆಟ್ಟಿ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್.ಶ್ರೀಶ ಕಾರಂತ ವಾರ್ಷಿಕ ವರದಿ ವಾಚಿಸಿದರು.ಸಹಾಯಕಿ ಸರೋಜ ಸಹಕರಿಸಿದರು.ಹಾಲು ಪರೀಕ್ಷಕಿ ಸಂಧ್ಯಾ ಎಸ್.ಕೆ ನಿರೂಪಿಸಿ,ವಂದಿಸಿದರು.
(ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮಂಗಳವಾರ ಹೊಸಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು)
