ಮಲೆನಾಡು ಘಾಟ್ ಪ್ರದೇಶದಿಂದ ಹರಿದು ಬರುತ್ತಿದೆ ನೀರು:ಚಕ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ

ಕುಂದಾಪುರ:ಮಲೆನಾಡು ಘಾಟ್ ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಚಕ್ರ ನದಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು ನದಿ ಪಾತ್ರದ ಜನತೆಗೆ ಆತಂಕ ಹುಟ್ಟಿಸಿದೆ.ಮಳೆ ಪ್ರಮಾಣ ಜಾಸ್ತಿ ಆಗಿರುವುದರಿಂದ ಚಕ್ರ ಹಾಗೂ ಶಾವೇಹಾಕ್ಲು ನಿಂದ ಹೆಚ್ಚುವರಿ ನೀರು ನದಿಯ ಮೂಲಕ ಹರಿದು ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.