ತೋಪ್ಲು ಕಿಂಡಿ ಅಣೆಕಟ್ಟಿಗೆ ಹೊಸ ಹಲಗೆ ಅಳವಡಿಕೆಗೆ ಗ್ರಾಮಸ್ಥರ ಆಗ್ರಹ

Share

Advertisement
Advertisement
Advertisement

ಕುಂದಾಪುರ:ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಶಿಥಿಲಾವಸ್ಥೆಯಲ್ಲಿರುವ ಹಲಗೆಗಳನ್ನು ಅಳವಡಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.

ಚಕ್ರ ನದಿ ತೀರದ ಗ್ರಾಮಗಳಾದ ಹಕ್ಲಾಡಿ,ಬಾರಂದಾಡಿ,ಬಗ್ವಾಡಿ,
ಕಟ್ ಬೇಲ್ತೂರು,ತುಳಸಿ,ತೋಪ್ಲು,ವಂಡ್ಸೆ ಗ್ರಾಮದ ಜನರಿಗೆ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 17 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಡಿ 13ಕೋಟಿ.ರೂ ವೆಚ್ಚದಲ್ಲಿ ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.ಅಣೆಕಟ್ಟಿನ ನಿರ್ವಹಣೆಗೆಂದೇ ವರ್ಷಕ್ಕೆ ಸರಿ ಸುಮಾರು 7.ಲಕ್ಷ.ಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ.ಅಣೆಕಟ್ಟಿನ ನಿರ್ವಹಣೆಯನ್ನು ಹಲವಾರು ವರ್ಷಗಳಿಂದಲೂ ಸರಿಯಾಗಿ ನಿರ್ವಹಿಸದೆ ಇದ್ದಿದ್ದರಿಂದ ಕಿಂಡಿ ಅಣೆಕಟ್ಟಿಗೆ ಅಳವಡಿಸುವ ಹಲಗೆಗಳು ದುಸ್ಥಿತಿಗೆ ತಲುಪಿದೆ.ಅಣೆಕಟ್ಟಿನ ಒಡಲಲ್ಲಿ ಹೂಳು ಮಣ್ಣು ತುಂಬಿಕೊಂಡಿದೆ.ಮಣ್ಣಿನ ರಾಶಿಗಳು ಅಲಲ್ಲಿ ಗುಡ್ಡೆಯಾಗಿ ಕೃತಕ ದ್ವೀಪ ಸೃಷ್ಟಿಯಾಗಿದೆ.ಸಣ್ಣ ನೀರಾವರಿ ಇಲಾಖೆ ಬೇಜಾವಾಬ್ದಾರಿ ತನದಿಂದ ಬಹುಪಯೋಗಿ ಯಾಗಿರುವ ಅಣೆಕಟ್ಟಿನ ಉಪಯೋಗ ಜನರಿಗೆ ತಲುಪದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಉಪ್ಪು ನೀರಿನ ತಡೆಗೆಂದೆ ಕಿಂಡಿಗಳಿಗೆ ಹಲಗೆಗಳನ್ನು ಅಳವಡಿಸಬೇಕಾಗಿರುವುದ
ರಿಂದ.ಹದಗೆಟ್ಟು ಹೋಗಿದ್ದ ಶಿಥಿಲಾವಸ್ಥೆಯಲ್ಲಿರುವ ಹಲಗೆಗಳನ್ನು ಅಳವಡಿಕೆ ಮಾಡಬಾರದೇನ್ನುವುದು ಗ್ರಾಮಸ್ಥರ ಆಗ್ರಹ.ದುಸ್ಥಿತಿಯಲ್ಲಿದ್ದ ಹಲಗೆಗಳನ್ನು ಅಳವಡಿಸುವುದರಿಂದ ಉಪ್ಪು ನೀರು ಒಳ ನುಗ್ಗಿ ಬರುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎನ್ನುವುದು ಗ್ರಾಮಸ್ಥರ ವಾದವಾಗಿದೆ.ತೋಪ್ಲು ಕಿಂಡಿ ಅಣೆಕಟ್ಟಿಗೆ ವೈಜ್ಞಾನಿಕ ರೀತಿಯಲ್ಲಿ ಕೂಡಿದ ಹಲಗೆಗಳನ್ನು ಅಳವಡಿಸಬೇಕ್ಕುನ್ನುವುದು ಗ್ರಾಮಸ್ಥರ ಬೇಡಿಕೆ.ಅವಧಿಗೆ ಮುನ್ನವೆ ಅಣೆಕಟ್ಟಿನ ಕಿಂಡಿಗಳಿಗೆ ಹಲಗೆಗಳನ್ನು ಹಾಕದೆ ಇದ್ದಿದ್ದರಿಂದ ಇಳಿತ,ಭರತದ ಮುಖೇನ ಈಗಾಗಲೇ ಹಿನ್ನಿರಿನ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದೆ.ಅಣೆಕಟ್ಟಿಗೆ ಹಲಗೆಗಳನ್ನು ಹಾಕಿ ನೀರನ್ನು ತಡೆ ಹಿಡಿಯುವುದರಿಂದ ಉಪ್ಪು ನೀರು ತುಂಬಿಕೊಂಡು ಬಾವಿ ನೀರು ಉಪ್ಪಾಗಲಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page