ಮೃತಪಟ್ಟ ಸ್ಥಿತಿಯಲ್ಲಿಅಪರೂಪದ ಜಾತಿಗೆ ಸೇರಿದ ಕಡಲಾಮೆ ಪತ್ತೆ
ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೈಟ್‌ಹೌಸ್ ಮಡಿ ಪರಿಸರದಲ್ಲಿ ಕಡಲ ಅಲೆಗೆ ಸಿಲುಕಿ ಮೃತಪಟ್ಟು ತೆರೆಗಳ ನಡುವೆ ತೆಲುತ್ತಿದ್ದ ಅಪರೂಪದ ಜಾತಿಗೆ ಸೇರಿದ ಕಡಲಾಮೆ ಶುಕ್ರವಾರ ಪತ್ತೆಯಾಗಿದೆ.
ಮೀನುಗಾರ ನಾಗರಾಜ್ ಖಾರ್ವಿ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ ಸಂದರ್ಭ ಅಲೆಗಳ ಮಧ್ಯೆ ಕಡಲಾಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಆಗಿದೆ.ಮೃತ ಕಡಲಾಮೆಯನ್ನು ಅವರು ತಮ್ಮ ಮರ್ಗಿ ಪಾತಿ ದೋಣಿಯಲ್ಲಿ ದಡಕ್ಕೆ ತಂದಿದ್ದರು.ಅತಿಯಾದ ವಾಸನೆಯಿಂದ ಕೂಡಿದ ಕಡಲಾಮೆಯನ್ನು ಬಳಿಕ ಸ್ಥಳೀಯರ ಸಹಕಾರದಿಂದ ಮಣ್ಣಿನಲ್ಲಿ ಹೂಳಲಾಯಿತು.
ಕಡಲಾಮೆ ಸಮುದ್ರದಲ್ಲಿ ಮತ್ಸö್ಯ ಸಂಪತ್ತನ್ನು ಸಂರಕ್ಷಣೆ ಮಾಡುವುದಲ್ಲದೆ ಮೀನುಗಳು ಸಮುದ್ರ ತೀರ ಪ್ರದೇಶಕ್ಕೆ ಬರುವಂತೆ ಸಹಾಯ ಮಾಡುತ್ತವೆ.ಮೀನುಗಾರರು ಕಡಲಾಮೆಗಳನ್ನು ಪೂಜನೀಯ ಭಾವನೆಯಲ್ಲಿ ನೋಡುತ್ತಾರೆ ಎಂದು ಮೀನುಗಾರರಾದ ವಿಶ್ವನಾಥ್ ಗಂಗೊಳ್ಳಿ ಹೇಳಿದರು.



















































































































































































































































































































































































































































































































































































































































































































































































































































































































































































































































































































































































































































































































































































































































































