ಮೇ.20 ರಂದು ಬಸ್ರೂರುನಲ್ಲಿ ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ

ಕುಂದಾಪುರ:ಯುನೈಟೆಡ್ ಟೊಯೋಟಾ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ ಬಸ್ರೂರು ಜಂಕ್ಷನ್ ನಲ್ಲಿ ಮೇ.20 ರಿಂದ ಮೇ.26 ರ ವರೆಗೆ ನಡೆಯಲಿದೆ.
ಊರಾಗ್ ಒಂದ ಕಾರ್ ಹಬ್ಬದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಹಳೆ ಕಾರನ್ನು ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಗ್ಲಾಂಝಾ ಕಾರ್ ಹಾಗೂ ಹೈರೈಡರ್ ಕಾರ್ ಗೆ ಒಂದು ಲಕ್ಷದ ವರೆಗೆ ಡಿಸ್ಕೌಂಟ್ ಆಫರ್ ಕಂಪನಿ ಕಡೆಯಿಂದ ನೀಡಲಾಗಿದ್ದು.ಪೋರ್ರ್ಚುನರ್ ಕಾರ್ ಖರೀದಿಸುವವರಿಗೆ ಮೂರು ಲಕ್ಷದ ವರೆಗೆ ರೀಯಾತಿ ದೊರೆಯಲಿದೆ.
ಕರಾವಳಿ ಭಾಗದಲ್ಲಿ ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಕಾರ್ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದು.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜಾಲಾಡಿ ಯಲ್ಲಿರುವ ಯುನೈಟೆಡ್ ಟೊಯೋಟಾ
ಬ್ರಾಂಚ್ ಮೆನೇಜರ್ ರವೀಂದ್ರ ಮಾತನಾಡಿ,ಉಡುಪಿ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕಾರ್ ಹಬ್ಬವನ್ನು ಬಸ್ರೂರು ಜಂಕ್ಷನ್ ನಲ್ಲಿ ಆಯೋಜನೆ ಮಾಡಲಾಗಿದೆ.ಮೇ.20 ರಿಂದ ಮೇ.26 ತನಕ ನಡೆಯಲಿರುವ ಕಾರ್ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಬೇಕೆಂದು ಕೇಳಿಕೊಂಡರು.
ಟೊಯೋಟಾ ಗ್ರೂಪ್ ಮಾರ್ಕೆಟಿಂಗ್ ಮ್ಯಾನೇಜರ್ ಸೋನಿಯಾ ಅವರು ಮಾತನಾಡಿ,ಆಕರ್ಷಕ ಬೆಲೆಯಲ್ಲಿ ತಮ್ಮ ಹಳೆ ಕಾರನ್ನು ಮಾರಾಟ ಮಾಡಿ ಸ್ಥಳದಲ್ಲೇ ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಹಣಕಾಸಿನ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ಪ್ರತಿ ಬುಕಿಂಗ್ ಗೆ ಅತ್ಯಾಕರ್ಷಕ ಉಡುಗೊರೆಗಳು ನೀಡಲಾಗುತ್ತದೆ ಇವೊಂದು ಸಂಭ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭಾರತದಲ್ಲಿ ಮನೆ ಮಾತಾಗಿರುವ ಯುನೈಟೆಡ್ ಟೊಯೋಟಾ ಕಂಪನಿ ಕಾರ್ ಉದ್ಯಮ ಕ್ಷೇತ್ರದಲ್ಲಿ ತನ್ನದೇ ರೀತಿಯ ಕೊಡುಗೆಯನ್ನು ನೀಡಿದೆ.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕಾರ್ ಗಳನ್ನು ಮಾರಾಟ ಮಾಡಿ ಕೊಂಡು ಬಂದಿರುವ ಯುನಿಟೆಡ್ ಟೋಯೊಟ ಕಂಪನಿ ಗ್ರಾಹಕರ ನೆಚ್ಚಿನ ಕಂಪೆನಿ ಕೂಡ ಹೌದು.