ವೈಷ್ಣವಿ ಖಾರ್ವಿ ಗೆ ಚಿನ್ನದ ಪದಕ

ಕುಂದಾಪುರ:ಪವರ್ ಸ್ಟಾರ್ ಫಿಟ್ನೆಸ್ ಸೆಂಟರ್ ನೆಲಮಂಗಲ ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸಬ್ ಜೂನಿಯರ್ 69 ಕೆಜಿ ವಿಭಾಗದಲ್ಲಿ ವೈಷ್ಣವಿ ಖಾರ್ವಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.ಅವರು ಕುಂದಾಪುರದ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಖಾರ್ವಿ ಕೇರಿ ಹಾಗೂ ನ್ಯೂ ಹರ್ಕ್ಯುಲೆಸ್ ಜಿಮ್ (ರಿ )ಕುಂದಾಪುರ ಸಂಸ್ಥೆಯ ಸದಸ್ಯರಾಗಿರುತ್ತಾರೆ.